ಜಾರಂದಗುಡ್ಡೆ ಕಳ್ಳಿಗೆ ಗ್ರಾಮದ ಸುಧೀರ್ ಕುಮಾರ್ಗೆ ಚಿನ್ನದ ಪದಕ

ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಇಂದು ದಕ್ಷತೆ, ನಿಷ್ಠೆ ಮತ್ತು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಾರಂದಗುಡ್ಡೆ ಕಳ್ಳಿಗೆ ಗ್ರಾಮದ ಸುಧೀರ್ ಕುಮಾರ್ ಅವರಿಗೂ ಪೊಲೀಸ್ ಇಲಾಖೆಯಲ್ಲಿ ದಕ್ಷಾ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಸಲಾಗಿದೆ.