ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ಚೆಲ್ಲಿದ ರೆಡಿಮಿಕ್ಸ್ ಟ್ರಕ್ : ಗುಡಿಸಿ ರಸ್ತೆ ಸ್ವಚ್ಛಗೊಳಿಸಿದ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್
ಮಂಗಳೂರು :ಪದುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾ.22: ಶನಿವಾರ ಸುರ್ಯೋಸ್ತಮದ ವೇಳೆಗೆ ರೆಡಿಮಿಕ್ಸ್ ಕಾಂಕ್ರೀಟ್ ಸಾಗಿಸುವ ಟ್ರಕ್‌ನ ನಿರ್ಲಕ್ಷ್ಯದಿಂದಾಗಿ, ಮಾರ್ಗದಲ್ಲಿ ಕಾಂಕ್ರೀಟ್ ಚೆಲ್ಲಿದ್ದರಿಂದ ದ್ವಿಚಕ್ರ ವಾಹನವೊಂದು ಜಾರಿ ರಸ್ತೆಗೆ ಅಪ್ಪಳಿಸಿತು. ಆದ್ದರಿಂದ ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ಇದನ್ನು ಗಮನಿಸಿದ ಸ್ಥಾನಿಯವಾಗಿ ಧರ್ಮಾರ್ಥ ಸೇವೆ ನೀಡುತ್ತಿರುವ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ತಕ್ಷಣವೇ ಎಚ್ಚರ ವಹಿಸಿ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವತಃ ಗುಡಿಸಿ ಸ್ವಚ್ಛಗೊಳಿಸಿದರು.

ರಸ್ತೆಯುದ್ದಕ್ಕೂ ಅತ್ತಿತ್ತ ಸಾಗುತ್ತಿದ ವಾಹನ ಸವಾರರು ಮತ್ತು ಸಾರ್ವಜನಿಕರು ಮೊರಾಸ್ ಅವರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಕಂಡು ಪ್ರಶಂಸಿದರು.