ಉಡುಪಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ

ಕರಾವಾಳಿ ಭಾಗದಲ್ಲಿ ಭಾರೀ ಮಳೆ ಉಂಟಾಗಿದೆ. ಉಡುಪಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ ಬಂದಿದೆ. ಗಾಳಿ ಅಬ್ಬರದಿಂದ ಜನ ದಿಕ್ಕಾಪಾಲಾಗಿದ್ದಾರೆ. ರಸ್ತೆಯಾದ್ಯಂತ ದೂಳು ಎದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯ ಮೇಲೆಲ್ಲಾ ತರಗೆಲೆಗಳ ಹಾರಾಟಗುಡುಗು ಸಹಿತ ಗಾಳಿ ಮಳೆ ಬಂದಿದೆ. ಜಿಲ್ಲೆಯ ಕಾರ್ಕಳ, ಮಣಿಪಾಲ, ಹಿರಿಯಡ್ಕ , ಉಡುಪಿ, ಬ್ರಹ್ಮಾವರ ಪರಿಸರದಲ್ಲಿ ವ್ಯಾಪಕ ಗಾಳಿ ಉಂಟಾಗಿದ್ದು, ತೀವ್ರ ಗಾಳಿ ಉಂಟಾದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.