ಬೀದರ್: ಲಗ್ನ ಪತ್ರಿಕೆ ಹಂಚಲು ಹೋಗಿದ್ದಾಗ, ಇತ್ತ ಖದೀಮರು ಮನೆಗೆ ಕನ್ನ

ಮನೆಯಲ್ಲಿ ಭದ್ರವಾಗಿ ಬೀಗ ಹಾಕಬೇಕು ಎನ್ನುವುದು ಇದಕ್ಕೆ ನೋಡಿ. ಬೀದರ್ ನಗರದ ಸಂಗಮೇಶ್ವರ ಕಾಲೋನಿಯಲ್ಲಿ ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧರೊಬ್ಬರು ಲಗ್ನ ಪತ್ರಿಕೆ ಹಂಚಲು ಹೋಗಿದ್ದಾಗ, ಇತ್ತ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಮಗಳ ಮದುವೆಗೆಂದು ಮಾಡಿದ್ದ 16 ತೊಲೆ ಬಂಗಾರ, 5 ತೊಲೆ ಬೆಳ್ಳಿ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಬೀದರ್ ನಗರದ ಸಂಗಮೇಶ ಕಾಲೋನಿಯ ಮಾಜಿ ಯೋಧ ವೀರಶೆಟ್ಟಿ ಘಾಳೆಪ್ಪಾ ರಾಮಶೆಟ್ಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಗೆ ಕನ್ನ ಹಾಕಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. 16 ತೊಲೆ ಬಂಗಾರ, 5 ತೊಲೆ ಬೆಳ್ಳಿ, 30 ಸಾವಿರ ನಗದು ಲೂಟಿ ಮಾಡಿದ್ದಾರೆ. ಈ ಬಗ್ಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಈ ಬಗ್ಗೆ ತನಿಖೆ ಆಗುತ್ತಿದೆ.