ಬಂಟ್ವಾಳ: ಮನುಷ್ಯ ತಾನು ಬೆಳೆದು ಬಂದ ದಾರಿಯನ್ನು ಎಂದೂ ಮರೆಯಬಾರದು,ಒಂದು ಗ್ರಾಮದ ಅಭಿವೃದ್ಧಿಯ ಆ ಊರಿನ ಯುವಜನತೆಯ ಅವಲಂಭಿತವಾಗಿದೆ.ಯುವ ಸಂಘಟನೆಗಳು ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ,ಕಾರ್ಯವನ್ನು ಮಾಡಬೇಕಾಗಿದೆ ಎಂದು ಮುಂಬೈಯ ಉದ್ಯಮಿ ಜಯರಾಮ ಹೆಗ್ಡೆ ಕುಡ್ವಪಾಲು ಹೇಳಿದ್ದಾರೆ.


ಸಜೀಪಮೂಡಗ್ರಾಮದ ನಗ್ರಿ ಶ್ರೀ ಶಾರದ ಮಂದಿರದ  ೧೩ ನೇ ವರ್ಷದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದಲ್ಲಿ‌ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ,ರವಿಶಂಕರ್  ಎನ್ ಶೆಟ್ಟಿ,ಶಿವಪ್ರಸಾದ್ ಶೆಟ್ಟಿ,ಸಂಜೀವಪೂಜಾರಿ  ಕುಚ್ಚಿಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಅದೇರೀತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀ ಶಾರದ ಮಂದಿರದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ವಹಿಸಿದ್ದರು.
ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು,ನಿವೃತ್ತ ಸಹಾಯಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಕೋಮಾಲಿ,ಸಿಎ ಪೌದನ್ ಕುಮಾರ್ ನಗ್ರಿ,ಮೋಹನ್ ನಾಯ್ಕ್ ನಗ್ರಿ,ಗಣೇಶ್ ನಾಯ್ಕ್ ನಗ್ರಿ,ವಿಜಯಲಕ್ಷ್ಮೀ,ಚಂದ್ರಶೇಖರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು.
ಶ್ರೀ ಶಾರದ ಮಂದಿರದ ನಿಕಟಪೂರ್ವ ಅಧ್ಯಕ್ಷ  ರತ್ನಾಕರ ಪೂಜಾರಿ ನಡಾರು ಸ್ವಾಗತಿಸಿದರು.ರಮೇಶ್ ಕುಲಾಲ್ ವಂದಿಸಿದರು.ಜಗದೀಶ್ ಪೂಜಾರಿ ಮತ್ತುಶುಭಲತಾ ಸುರೇಶ್ ನಗ್ರಿ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *