ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕೈಕಂಬ ಇದರ ನೂತನ ಸಭಾಭವನಕ್ಕೆ ಶಿಲಾನ್ಯಾಸ
ಕೈಕಂಬ: ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕೈಕಂಬ ಇದರ ನೂತನ ಸಭಾಭವನದ ಶಿಲಾನ್ಯಾಸವು ಮಾ. 6 ರಂದು ಗುರುವಾರ ನೆರವೇರಿತು. ಶ್ರೀ ಧನಂಜಯ ಪುರೋಹಿತರ ನೇತ್ರತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ಕರಿಯಂಗಳ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಭಾಭವನದ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಜಿ. ಗಣೇಶ ಆಚಾರ್ಯ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ, ಉಪಾಧ್ಯಕ್ಷರಾದ ಸತೀಶ್ ಆಚಾರ್ಯ ಜಲಕದಕಟ್ಟೆ, ಆನಂದ ಆಚಾರ್ಯ ಕೈಕಂಬ, ಶಾಲಿನಿ ಜನಾರ್ಧನ ಆಚಾರ್ಯ, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು, ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ಕರಿಯಂಗಳ,ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಕಾರ್ಯದರ್ಶಿ ಭವಾನಿಶಂಕರ ಆಚಾರ್ಯ , ಶ್ರೀಮತಿ ಅಖಿಲಾ ಉಮೇಶ್ ಆಚಾರ್ಯ , ಗಾಯತ್ರಿ ಮಹಿಳಾ ಸಮಿತಿ ಅಧ್ಯಕೆ ವನಿತಾ ಆನಂದ ಆಚಾರ್ಯ ಹಾಗೂ ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

