ಬಜ್ಪೆ ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಭೆ
ಬಜ್ಪೆ: ಬಿಲ್ಲವ ಸಂಘದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಮ ಪೂಜಾರಿ ನೇತೃತ್ವದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಭೆ ಜರಗಿತು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಮಾತನಾಡಿ ಬಜ್ಪೆ ಬಿಲ್ಲವ ಸಂಘ ಬಜ್ಪೆ ಹಾಗೂ ಸುತ್ತಮುತ್ತ ವ್ಯಾಪ್ತಿಯಲ್ಲಿ ಗೆಜ್ಜೆಗಿರಿ ಜಾತ್ರೋತ್ಸವದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡ ಬೇಕು ವಿನಂತಿಸಿದರು.

ಗೆಜ್ಜೆಗಿರಿಯು ಪ್ರತಿಯೊಬ್ಬ ಬಿಲ್ಲವನ ಶ್ರಮದಿಂದ ನಿರ್ಮಾಣವಾದ ಕ್ಷೇತ್ರ ಈ ಜಾತ್ರೋತ್ಸವದ ಯಶಸ್ವಿ ಗೆ ನೇತೃತ್ವವನ್ನು ಬಿಲ್ಲವ ಸಂಘಗಳು ವಹಿಸುತ್ತಿರುವುದ ಸಮಾಜದ ಅಭಿವೃದ್ಧಿಯ ಆಶಾದಾಯಕ ಬೆಳವಣಿಗೆ ಎಂದರು. ಸಭೆಯಲ್ಲಿ ಬಜ್ಪೆ ಬಿಲ್ಲವ ಸಂಘದ ಗೌರವ ಅಧ್ಯಕ್ಷ ಎಲ್. ವಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು ಮುಂತಾದವರರು ಉಪಸ್ಥಿತರಿದ್ದರು.