ಫೆ. 28ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆ ಮಂಗಳೂರಿನಿಂದ ಹೊರೆಕಾಣಿಕೆ
ಕೈಕಂಬ: ಪುತ್ತೂರಿನ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಮಾರ್ಚ್ 1ರಿಂದ ಆರಂಭವಾಗಲಿರುವ ವಾರ್ಷಿಕ ಜಾತ್ರೋತ್ಸವಕ್ಕೆ ಮಂಗಳೂರು ನಗರದಿಂದ ಫೆ. 28ರಂದು ಗೆಜ್ಜೆಗಿರಿಗೆ ಬೃಹತ್ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪದಾಧಿಕಾರಿ ಮೋಹನದಾಸ್ ಬಂಗೇರ ವಾಮಂಜೂರು ತಿಳಿಸಿದರು.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಹೆಚ್ಚಿನ ಪ್ರಮಾಣದ ಹೊರೆಕಾಣಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಭರವಸೆ ನೀಡಿದ್ದರೆ, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮನಪಾ ವಾರ್ಡ್‍ಗಳಿಂದ ಹಾಗೂ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರು ಹಿಂದೂ ಸಂಘಟನೆಗಳಿಂದ ಹೊರೆಕಾಣಿಕೆ ವಾಹನಗಳ ವ್ಯವಸ್ಥೆಯ ಭರವಸೆ ನೀಡಿದ್ದಾರೆ ಎಂದರು.
ಫೆ. 28ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲಾ ಕಡೆಯಿಂದ ಮಂಗಳೂರಿಗೆ ಬರುವ ಹೊರೆಕಾಣಿಕೆಯ ವಾಹನಗಳು ಕಂಕನಾಡಿ ಗರಡಿಯಲ್ಲಿ ಒಟ್ಟು ಸೇರಲಿವೆ. ಗರಡಿಯಲ್ಲಿ ವಿಶೇಷ ಪೂಜೆ ನಡೆದ ಬಳಿಕ ಹೊರೆಕಾಣಿಕೆ ವಾಹನಗಳು ಕಂಕನಾಡಿ ಶ್ರೀ ಬೈದರ್ಕಳ ಗರಡಿಯಿಂದ ಪುತ್ತೂರಿನತ್ತ ಸಾಗಲಿವೆ. ಮಧ್ಯಾಹ್ನ 1 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಪರಾಹ್ನ 3 ಗಂಟೆಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹೊರೆಕಾಣಿಕೆ ವಾಹನಗಳು ತಲುಪಲಿವೆ ಎಂದು ಗೆಜ್ಜೆಗಿರಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸತೀಶ್ ಕುಂಪಲ ತಿಳಿಸಿದರು.