ಬೂಡಿಯಾರ್ ರಾಧಾಕೃಷ್ಣ ರೈ ಅವರಿಗೆ ಅಮ್ಮುಂಜೆಯಲ್ಲಿ ಗೌರವಾರ್ಪಣೆ
ಪೊಳಲಿ: ಅಮ್ಮುಂಜೆ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಗುವಲ್ಲಿ ಸಂಪೂರ್ಣಸಹಕರಿಸಿದ ದ.ಕ.ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ ಅವರನ್ನು ಅಮ್ಮುಂಜೆ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದ.ಕ.ಹಾಲು ಒಕ್ಕೂಟದ ಅಧ್ಯಕ್ಷಕೆ.ಪಿ.ಸುಚರಿತ ಶೆಟ್ಟಿ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ದ.ಕಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಎನ್ ಶೆಟ್ಟಿ, ದ.ಕ ಹಾಲು ಒಕ್ಕೂಟದ ವ್ಯವಸ್ಥಪಕ ನಿರ್ದೇಶಕರು ವಿವೇಕ ಡಿ. , ಎ.ಎಚ್ ರಂಗನಾಥ ಶೆಟ್ಟಿ , ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ, ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಯನ ಕುಮಾರಿ, ಪೊಳಲಿ ವ್ಯ.ಸೇ.ಸ.ಸಂಘದ ನಿರ್ಧೇಶಕ ಅಬುಬಕ್ಕರ್ ಅಮ್ಮುಂಜೆ, ದ.ಕ.ಹಾಲುಒಕ್ಕೂಟ ಜಗದೀಶ. ಎ, ಮತ್ತಿತರರು ಇದ್ದರು.