ಬಂಟ್ವಾಳ: ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಅಧ್ಯಕ್ಷ ರವೀಂದ್ರ ಕಂಬಳಿಗೆ ಅಭಿನಂದನೆ

ಬಂಟ್ವಾಳ: ರಾಜ್ಯ ಮಟ್ಟದ 2024-25 ನೇ ಸಾಲಿನ “ಸಹಕಾರ ರತ್ನ ” ಪ್ರಶಸ್ತಿ ಪುರಸ್ಕೃತರಾದ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅವರನ್ನು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅಭಿನಂದಿಸಲಾಯಿತು.ಈ ಸಂದರ್ಭ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಅಭಿನಂದಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ,ನಿರ್ದೇಶಕರಾದ ಬಿ. ಟಿ. ನಾರಾಯಣ ಭಟ್, ಸುಂದರ ಭಂಡಾರಿ ರಾಯಿ, ಪದ್ಮನಾಭ ಕಿಡೆಬೆಟ್ಟು ಫರಂಗಿಪೇಟೆ,ಮನೋರಾಜ್ ಶೆಟ್ಟಿ, ವೆಂಕಟ್ರಾಯ ಪ್ರಭು ಕಲ್ಲಡ್ಕ, ರಾಮ ನಾಯ್ಕ, ರತ್ನ, ಜ್ಯಾನೇಶ್ವರ ಪ್ರಭು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.