ಬಂಟ್ವಾಳ: 3 ಗ್ರಾಮಗಳಲ್ಲಿ ಪಂಚ ಗ್ಯಾರಂಟಿ ಯೋಜನೆ ನೋಂದಾವಣೆ ಬಾಕಿ, ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ

ಬಂಟ್ವಾಳ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ನರಿಕೊಂಬು, ಸಜಿಪಮೂಡ, ಸಜಿಪಮೂನ್ನೂರು ಗ್ರಾಮಗಳನ್ನು ಒಳಗೊಂಡು ಸಜಿಪಮೂಡ ಗ್ರಾ.ಪಂ ವಠಾರದಲ್ಲಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ನಡೆಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು, ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗಲೆಲ್ಲಾ ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ನೇತೃತ್ವದ ಕರ್ನಾಟಕ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಬಡವರ ಕಲ್ಯಾಣಕ್ಕಾಗಿ ಜಾರಿಗೆ ತಂದಿದ್ದು,ಇದನ್ನು ಕೂಡ ವಿರೋದಿಸುವವರು ಪ್ರಸ್ತುತ ದಿನಗಳಲ್ಲಿದ್ದಾರೆ. ಅದರೆ ನಾವು ಯಾವತ್ತು ಸಹಾಯ ಮಾಡಿದವರನ್ನು ಮರೆಯಬಾರದು ಎಂದು ಅವರು ಹೇಳಿದರು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ,ಪ್ರತಿಯೊಬ್ಬರಿಗೆ ಪಂಚ ಗ್ಯಾರಂಟಿಯ ಸೌಲಭ್ಯ ತಲುಪಬೇಕೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಬಂಟ್ವಾಳದಲ್ಲಿ ಸಮಿತಿಯ ಪರಿಕಲ್ಪನೆಯಲ್ಲಿ ವಿಲೇವಾರಿ ಶಿಬಿರ ನಡೆಯುತ್ತಿರೊದು ಅಭಿನಂದನೀಯವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ವಹಿಸಿದ್ದರು. ಯೋಜನೆಯಿಂದ ಯಾರು ಕೂಡ ಹೊರಗೆ ಉಳಿಯಬಾರದು,ಐ.ಟಿ.ಹಾಗೂ ಜಿ.ಎಸ್.ಟಿ ಸಮಸ್ಯೆಯಿಂದ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಸಾದ್ಯವಾಗುತ್ತಿಲ್ಲ, ಇನ್ನೆರಡು ತಿಂಗಳ ಒಳಗಾಗಿ ಈ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಸರಿ ಪಡಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ,ಸಜಿಪಮೂಡ ಗ್ರಾಪಂ ಅದ್ಯಕ್ಷೆ ಶೋಭಾ ಶೆಟ್ಟಿ,ಉಪಾಧ್ಯಕ್ಷೆ ಪೌಝಿಯಾ,ಬೂಡ ಅಧ್ಯಕ್ಷರಾದ ಬೇಬಿ ಕುಂದಾರ್,ಮಾಜಿ ತಾ.ಪಂ ಉಪಾಧ್ಯಕ್ಷ ಅಬ್ಬಸ್ ಆಲಿ,ಮಾಜಿ ತಾ.ಪಂ ಸದಸ್ಯ ಸಂಜೀವ ಪೂಜಾರಿ,ಸಿಂಡಿಕೇಟ್ ಸದಸ್ಯ ಸುರೇಶ್ ಕುಲಾಲ್, ಮಜಾಇ ಎಪಿಎಂಸಿಅಧ್ಯಕ್ಷ ಪದ್ಮನಾಭ ರೈ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ,ಪದ್ಮನಾಭ ರೈ,ಪಕ್ಷದ ಸ್ಥಳೀಯ ಪ್ರಮುಖರದಾದ ದೇವಿಪ್ರಸಾದ್ ಪೂಂಜಾ , ಸ್ಟೀವನ್,ವಿಶ್ವನಾಥ ಬೆಳ್ಚಾಡ,ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸರ್ವಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಣ,ಮಾಯಾ ಕುಮಾರಿ,ಹರೀಶ್ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯ ಗಿರೀಶ್ ಪೆರ್ವ ಸ್ಚಾಗತಿಸಿದರು, ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ವಂದಿಸಿದರು,ಇರಾ ಗ್ರಾ.ಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.