ಗದಗ: ಗೃಹಲಕ್ಷಿಗೆ ಒಲಿದ ಗಂಗಾ ಮಾತೆ: ಗೃಹಲಕ್ಷ್ಮೀ ಹಣದಲ್ಲಿ ಬೋರ್ ವೆಲ್ ಕೊರಿಸಿದ ಅತ್ತೆ ಸೊಸೆ

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಸೊಸೆ ಒಂದು ಮಹತ್ವದ ಕಾರ್ಯ ಮಾಡಿದ್ದಾರೆ, ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಲ್ಲಿ ನೀಡುವ 2 ಸಾವಿರ ರೂ. ಹಣವನ್ನು ಕೂಡಿಟ್ಟು, ಬೋರ್ ವೆಲ್ ಕೊರಸಿದ್ದಾರೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದೆ. ಫ್ರಿಜ್ ತೆಗೆದುಕೊಂಡದ್ದು, ಫೋನ್ ತೆಗೆದುಕೊಂಡದ್ದು. ಇದೀಗ ಗೃಹಲಕ್ಷಿಗೆ ಒಲಿದ ಗಂಗಾ ಮಾತೆ ಎಂದು ಹೇಳಲಾಗುತ್ತಿದೆ.
ಅತ್ತೆ ಮಾಬುಬೀ, ಸೊಸೆ ರೋಷನ್ ಬೇಗಂ ಗೃಹ ಲಕ್ಷೀ ಯೋಜನೆ ಹಣ ಪ್ರತಿ ತಿಂಗಳ ಕೂಡಿಟ್ಟು, ಒಟ್ಟು 44 ಸಾವಿರ ರೂ. ಬೋರ್ ವೆಲ್ ಕೊರಿಸಲು ನೀಡಿದ್ದಾರೆ. ಬೋರ್ ವೆಲ್ ಕೊರಿಸಲು 60 ಸಾವಿರ ಖರ್ಚು ಆಗಿದೆ. ಅದ್ರಲ್ಲಿ ಗೃಹಲಕ್ಷೀ ಯೋಜನೆ 44 ಸಾವಿರ ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ಹಾಕಿ ಬೋರ್ ವೆಲ್ ಕೊರಿಸಿದ್ದಾರೆ.
ಇದೀಗ ಕೊಳವೆ ಬಾವಿ ಕೊರೆಸಿದ್ದು, ಭರ್ಜರಿ ನೀರು ಬಿದ್ದಿದೆ. ಸಿದ್ದರಾಮಯ್ಯ ಅವರು ನೀಡಿದ ಗೃಹ ಲಕ್ಷೀ ಯೋಜನೆ ತುಂಬಾನೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅತ್ತೆ ಸೊಸೆ ಹೇಳಿದ್ದಾರೆ.