ಗದಗ: ವಕ್ಫ್ ಆಸ್ತಿ ವಿವಾದ; ದೇಶ ಕಾಯುವ ಯೋಧನ ಜಮೀನು ವಕ್ಫ್ ಪಾಲು

ರಾಜ್ಯದಲ್ಲಿ ವಕ್ಫ್ ವಿವಾದ ಕಡಿಮೆಯಾಗುತ್ತಿದ್ದಂತೆ ಇದೀಗ ದೇಶ ಕಾಯುವ ಯೋಧನ ಜಮೀನು ಕೂಡ ವಕ್ಫ್ ಪಾಲಾಗಿದ್ದು, ಗದಗ ಜಿಲ್ಲೆಯ ರೋಣ ತಾಲೂಕಿನ ಅಮರಗೋಳ ಗ್ರಾಮಕ್ಕೆ ಸೇರಿದವನಾಗಿದ್ದಾರೆ. ನಿವೃತ್ತಿ ಬಳಿಕ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧನ ಈ ಪಹಣಿಯಲ್ಲಿ ವಕ್ಫ್ ನಮೂದಾಗಿದ್ದು ನೋಡಿ ಯೋಧನ ಕುಟುಂಬ ಕಂಗಾಲಾಗಿದೆ.
2018-19 ರಲ್ಲಿ ವಕ್ಫ್ ಅಂತ ನಮೂದಾಗಿದೆ. ನಾನು ದೇಶ ಕಾಯ್ದೆ, ಆದ್ರೆ ರಾಜ್ಯ ಸರ್ಕಾರ ನನ್ನ ಆಸ್ತಿ ಕಾಯಲಿಲ್ಲ ಎಂದು ನಿವೃತ್ತಿ ಆರ್ಮಿ ಯೋಧ ಶಿವಪ್ಪ ಅಂಗಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಯೋಧನ ಕುಟುಂಬ ಆಕ್ರೋಶ ವ್ಯಕ್ತಪಡಿಸುವ ಮೂಲಕ ನಮ್ಮ ಪಹಣಿಯಲ್ಲಿನ ವಕ್ಫ್ ತೆಗೆಯುವಂತೆ ಒತ್ತಾಯಿಸಿದ್ದಾರೆ.