ಭಕ್ತರೇ ಎಚ್ಚರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಡಾನೆ ಬಂದಿದೆ, ದೇಗುಲದ ಆನೆ ಎಂದು ನಮಸ್ಕಾರ ಮಾಡಬೇಡಿ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಾಡಾನೆಯೊಂದು ಬಂದಿದೆ. ದೇವಸ್ಥಾನದ ಸುತ್ತಾಮುತ್ತಾ ಈ ಕಾಡಾನೆ ಓಡಾಡುತ್ತಿದೆ. ಇನ್ನು ದೇವಾಲಯಕ್ಕೆ ಬಂದ ಭಕ್ತರು, ಇದು ದೇವಸ್ಥಾನದ ಆನೆ ಎಂದು ನಮಸ್ಕಾರ ಮಾಡಲು ಹೋಗಿದ್ದಾರೆ. ಈಗಾಗಲೇ ಕಾಡಾನೆಯನ್ನು ಹಿಡಿಯಲು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಿದ್ದಾರೆ. ಈ ಆನೆ ಮಠದ ಬಳಿ ಕೂಡ ಹೋಗಿದೆ. ಇನ್ನು ಕಾಡಾನೆ ಓಡಿಸಲು ಜನರು ಮುಂದಾಗಿದ್ದಾರೆ.
ಇನ್ನು ಈಗ ಕುಕ್ಕೆಯಲ್ಲಿ ಉತ್ಸವ ನಡೆಯುತ್ತಿರುವ ಕಾರಣ ಬೆಳಕು, ಬ್ಯಾಂಡ್ ಸದ್ದಿಗೆ ಈ ಕಾಡಾನೆ ಬೆದರಿ ದಿಕ್ಕು ಪಾಲಾಗಿ ಓಡುತ್ತಿದೆ. ಇನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಆಡಳಿತ ಮಂಡಲಿ ಹಾಗೂ ಅರಣ್ಯಾಧಿಕಾರಿಗಳು ದೇಗುಲದ ಆನೆ ಎಂದು ನಮಸ್ಕಾರ ಮಾಡಲು ಭಕ್ತರು ಮುಂದಾಗಬಾರದು ಎಂದು ಆದೇಶವನ್ನು ನೀಡಿದೆ.