ಫೆಂಗಲ್ ಚಂಡಮಾರುತ: ಸೋಮೇಶ್ವರ, ಬಟ್ಟಪಾಡಿ ಕಡಲತೀರದಲ್ಲಿ ಕಡಲಬ್ಬರ
ಮಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅಪ್ಪಳಿಸಿದ್ದು, ಇದೀಗ ಇದರ ಪರಿಣಾಮ ರಾಜ್ಯಕ್ಕೂ ತಟ್ಟಿದೆ. ಇದೀಗ ರಾಜ್ಯ ಕರಾವಳಿ ಭಾಗಕ್ಕೂ ಫೆಂಗಲ್ ಚಂಡಮಾರುತದ ಎಫೆಕ್ಟ್ ಉಂಟಾಗಿದೆ. ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಮಂಗಳೂರು ಹೊರವಲಯದ ಸೋಮೇಶ್ವರ, ಬಟ್ಟಪಾಡಿ ಕಡಲತೀರದಲ್ಲಿ ಕಡಲಬ್ಬರ ಉಂಟಾಗಿದೆ. ಕಡಲ ತೀರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ. ಗಂಟೆಗೆ 30 ರಿಂದ 35 ಕಿ.ಮೀ ವೇಗದಲ್ಲಿ ಈ ಗಾಳಿ ಬೀಸುತ್ತಿದೆ. ಇನ್ನು ಅಲೆಗಳು ಕಡಲ ತೀರಕ್ಕೆ ಬಂದು ಜೋರಾಗಿ ಅಪ್ಪಳಿಸುತ್ತಿದೆ. ಬೆಳಗ್ಗಿನಿಂದಲೂ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಉಂಟಾಗಿದೆ.