ಬಂಟ್ವಾಳ : ಅಲ್ ಹುದಾ ಎಜುಕೇಷನ್ ಟ್ರಸ್ಟ್ ಫರಂಗೀಪೇಟೆ ಇದರ ಅಧೀನದಲ್ಲಿ ಅಲ್ ಬಿರ್ರ್ ಸ್ಕೂಲ್ ಉದ್ಘಾಟನಾ ಸಮಾರಂಭ ನಡೆಯಿತು . ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಮದ್ ಜಿಫ್ರೀ ಮುತ್ತುಕೊಯ ತಂಙಳ್ ಅವರು, ಅಲ್ ಬಿರ್ರ್ ಸ್ಕೂಲ್ ಉದ್ಘಾಟಿಸಿದರು. ಪರಂಗಿಪೇಟೆ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಸನಬ್ಬ ಗುಡ್ಡಮನೆ ಅವರಿಗೆ ಕಟ್ಟಡದ ಕೀ ಹಸ್ತಾಂತರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶೈಖುನಾ ಅಬ್ಬುಲ್ ಖಾದರ್ ಅಲ್ ಖಾಸಿಮಿ ಬಂಬ್ರಣಾ ಅವರು ಮಾತನಾಡಿ, ಆಧುನಿಕ ಕಾಲದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಮನಗಂಡು ಅಲ್ ಬಿರ್ರ್ ಸ್ಕೂಲ್ ಆರಂಭಿಸಿದ್ದು, ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫರಂಗಿಪೇಟೆ ಅಲ್ ಹುದಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ
ಜನಾಬ್ ಉಮರ್ ಫಾರೂಕ್ ವಹಿಸಿದ್ದರು. ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇರ್ಷಾದ್ ದಾರಿಮಿ ಮಿತ್ತ್ ಬೈಲ್, ವಳಚ್ಚಿಲ್ ಮಸೀದಿಯ ಖತೀಬ್ , ಕುಕ್ಕಿಲ ದಾರಿಮಿ, ತುಂಬೆ ಮಸೀದಿಯಾ ಖತೀಬ್ , ಅಬುಸಾಲಿ ಫೈಝೀ, ಪರಂಗಿಪೇಟೆ ಮಸೀದಿ ಖತೀಬ್ ಅಬ್ದುಲ್ ರಶೀದ್ ಹಮಾನಿ, ಕುಂಪಲ ಮಜಲ್ ಮಸೀದಿಯ ಖತೀಬ್ ಉಬೆದುಲ್ಲಾ ಅಝಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಮದ್ ಜಿಫ್ರೀ ಮುತ್ತುಕೊಯ ತಂಙಳ್ ಅವರು ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಆಶೀರ್ವದಿಸಿದರು.
ಮುಹಮ್ಮದ್ ಬುಖಾರಿ ಕುಂಪನಮಜಲ್ , ರಮಲಾನ್ ಮಾರಿಪಳ್ಳ , ಇಮ್ತಿಯಾಜ್ ಅಲ್ಫಾ ತುಂಬೆ,
ಮುಹಮ್ಮದ್ ಶರೀಫ್ ತುಂಬೆ, ಇಸ್ಹಾಖ್ ತುಂಬೆ,
ಹಾಜಿ ಅಬೂಸ್ವಾಲಿಹ್ ಫರಂಗೀಪೇಟೆ, ಅಶ್ರಫ್ ಕುಂಜತ್ಕಲ , ಪೈರೋಝ್ EBR ಫರಂಗೀಪೇಟೆ
