Published On: Mon, Dec 2nd, 2024

ಪೇಜಾವರ ಮಾಗಣೆ ಸಾರಬಳಿ ಶ್ರೀ ಧೂಮಾವತಿ ಬಂಟ ದೈವಸ್ಥಾನಕ್ಕೆ ಕೊಡಿ ಮರ, ಭವ್ಯ ಮೆರವಣಿಗೆ

ಸುರತ್ಕಲ್ : ಪೇಜಾವರ ಮಾಗಣೆ ಸಾರಬಳಿ ಶ್ರೀ ಧೂಮಾವತಿ ಬಂಟ ದೈವಸ್ಥಾನಕ್ಕೆ ಕೊಡಿ ಮರ, ಭವ್ಯ ಮೆರವಣಿಗೆಯು ಬಜಪೆ ಕೇಂದ್ರ ಮೈದಾನದಿಂದ ತಾರಬರಿ ಸನ್ನಿಧಾನಕ್ಕೆ ಡಿ 8 ರಂದು ಭಾನುವಾರ ಮದ್ಯಾಹ್ನ ಹೊರಡಲಿದೆ.


ಸುಂಠಿಬೊಟ್ಟು ಜನನ, ತಾರಬರಿತ ಮಣ್ಣ್” ಎಂಬ ದೈವ ಜುಮಾದಿಯ ತುಳುವಿನ ಆದಿ ನುಡಿಯಂತೆ ಪೇಜಾವರ ಮಾಗಣೆಯ ಐದು ಗ್ರಾಮಗಳ ಆರಾಧ್ಯ ದೈವಗಳಾಗಿ ಸುಮಾರು 800 ವರ್ಷಗಳಿಗೂ ಮಿಕ್ಕಿದ ಐತಿಹ್ಯದ ಕಾರಣಿಕದೊಂದಿಗೆ ನಂಬಿದ ಭಕ್ತರನ್ನು ಸಲಹುತ್ತಿರುವುದು, ಸದ್ರಿ ಸನ್ನಿಧಿಯ ಜೀರ್ಣೋದ್ದಾರದ ಪೂರ್ವಭಾವಿಯಾಗಿ ವ್ಯವಸ್ಥೆ ಮಾಡಲಾದ ನೂತನ ಪವಿತ್ರ “ಕೊಡಿ ಮರ”ವನ್ನು ತಾ. ಡಿಸೆಂಬರ್ 8 ಆದಿತ್ಯವಾರ ಬಜಪೆ ಕೇಂದ್ರ ಮೈದಾನದಿಂದ ಅಪರಾಹ್ನ 2.00 ಗಂಟೆಗೆ ಸರಿಯಾಗಿ ಮಾಗಣೆ ಸರ್ವರ ಹಾಗೂ ಪರವೂರ ಭಕ್ತರ ಕೂಡುವಿಕೆಯಿಂದ ‘ಭವ್ಯ ಮೆರವಣಿಗೆ’ಯಲ್ಲಿ ತಾರಬರಿ ಸನ್ನಿಧಾನಕ್ಕೆ ತರಲು ನಿಶ್ಚಯಿಸಲಾಗಿದೆ.
ಪವಿತ್ರ ಕೊಡಿಮರ, ಪೀಠ ಹಾಗೂ ತಾಮ್ರ ಹೊದಿಕೆ ಸಹಿತ ಸೇವಾರ್ಥಿ: ಚಿಕ್ಕಪರಾರಿ ಶ್ರೀ ವಿಜಯ ಅನಂತ ಶೆಟ್ಟಿ ಮತ್ತು ಮಕ್ಕಳು. ಸದ್ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter