ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ ರಥದ ಅಚ್ಚು ಮುರಿದು ಅವಘಡ; ನೂತನ ರಥ ಸಮರ್ಪಣೆ ಮಾಡಿದ ಉದ್ಯಮಿ ವೆಂಕಟೇಗೌಡ
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ಸಮರ್ಪಣೆ ಮಾಡಲಾಗಿದೆ. ಗ್ರಾನೈಟ್ ಉದ್ಯಮಿ ಹುರಳಗುರ್ಕಿ ವೆಂಕಟೇಗೌಡ ರಿಂದ ರಥ ಸಮರ್ಪಣೆ ಮಾಡಿದ್ದಾರೆ. ನಂದಿ ಜಾತ್ರೆಯಲ್ಲಿ ರಥದ ಅಚ್ಚು ಮುರಿದು ಅವಘಡ ಸಂಭವಿಸಿತ್ತು.ಅಪರಿಚಿತ ವೃದ್ದನೊರ್ವ ವೆಂಕಟೇಗೌಡ ಕೈಲ್ಲಿ ತಾಂಬಲ ನೀಡಿ ರಥ ಮಾಡಿಸುವಂತೆ ಮನವಿ ಮಾಡಿದ್ದರು. ಅಪರಿಚಿತ ವೃದ್ದನ ಮನವಿಯ ಮೇರೆಗೆ ಉದ್ಯಮಿ ಹುರಳಗುರ್ಕಿ ವೆಂಕಟೇಗೌಡ ದೇವಸ್ಥಾನಕ್ಕೆ ನೂತನ ರಥ ದಾನ ಮಾಡಿದ್ದಾರೆ.