ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹೊಸ ಮನೆ ನೀಡಿದ ಕೊಡುಗೈ ದಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು

ಊರಿನ ಕೊಡುಗೈ ದಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ವತಿಯಿಂದ ನೂತನವಾಗಿ ಕಲ್ಕುಟ ಕೊಳದ ಬಳಿ ದೋಟ ಎಂಬಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ನಿರ್ಮಿಸಿದ ಬಾಬಿ ನಿವಾಸ ಎಂಬ ನೂತನ ಗೃಹದ ಕೀಲಿಕೈ ಹಸ್ತಾಂತರ ಕಾರ್ಯಕ್ರಮವು ನವೆಂಬರ್ 22ರಂದು ನಡೆಯಿತು. ಸಂಜೆ ಕಲ್ಕುಟ ಕೊಳದ ಬಲಿದೋಟ ಗಂಗಾಧರ ಪೂಜಾರಿ ಕುಟುಂಬಕ್ಕೆ ನೂತನ ಗೃಹದ ಕೀಲಿಕೈ ಹಸ್ತಾಂತರಿಸಲಾಯಿತು.

ಈ ವೇಳೆಯಲ್ಲಿ ಪೊಳಲಿ, ವೆಂಕಟೇಶ್ ನಾವಡ, ಭುವನೇಶ್ ಪಚ್ಚಿನಡ್ಕ, ಯಶವಂತ ಪೊಳಲಿ, ಸ್ಥಳದಾನಿ ಭರತ್ ಕಲ್ಕುಟ, ಯಶೋಧರ ಕಲ್ಕುಟ, ದಾಮೋಧರ ಅಯ್ಯರೆಬೆಟ್ಟು, ನವೀನ್ ಪೊಳಲಿ, ಎಸ್ ಆರ್ ಫ್ರೆಂಡ್ಸ್ ಇದರ ಸದಸ್ಯರು, ಶ್ರೀ ಧರ್ಮಜ್ಯೋತಿ ಕಲ್ಕುಟ ಇದರ ಸದಸ್ಯರು , ಬಿಜೆಪಿ ಕಾರ್ಯಕರ್ತರು, ಹಾಗೂ ಊರಿನ ದಾನಿಗಳು ಮತ್ತಿತ್ತರರು ಉಪಸ್ಥಿತರಿದ್ದರು