ಜಮಖಂಡಿ: ಸಾಲ ವಸೂಲಿಗಾಗಿ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಜಯನಗರ: ಸಾಲ ವಸೂಲಿಗಾಗಿ ನವಚೇತನ ಮೈಕ್ರೋ ಫೈನಾನ್ಸ್ ನನಗೆ ಕಿರುಕುಳ ನೀಡಿದೆ ಎಂದು ಜಮಖಂಡಿ ನಗರದ ಜಯನಗರದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಯತ್ನಿಸಿದ್ದಾನೆ. ಆಸಿಪ್ ಮೋಮಿನ್(30) ವಿಷ ಸೇವಿಸಿ ಆತ್ಮಹತ್ಯೆ ಯತ್ನ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದೀಗ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವಚೇತನ ಮೈಕ್ರೋ ಫೈನಾನ್ಸ್ ದಿನನಿತ್ಯ ಸಾಲ ವಸೂಲಿ ಕಿರುಕುಳ ನೀಡ್ತಾರೆ. ಬೆಳಿಗ್ಗೆ ಬಂದವರು ರಾತ್ರಿವರೆಗೂ ಮನೆ ಮುಂದೆ ಕೂರ್ತಾರೆ.ಸಾಲ ಪಾವತಿಸಲೇಬೆಕು ಅಲ್ಲಿವರೆಗೂ ಹೋಗೋದಿಲ್ಲ ಎಂದು ಕಿರುಕುಳ ನೀಡುತ್ತಾರೆ ಎಂದು ಹೇಳಿದ್ದಾನೆ.