ಬಡಗಬೆಳ್ಳೂರು ಗ್ರಾಮಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಿದ ಬಿಜೆಪಿ, ಮೋಹನ್ ದಾಸ್ ಕೊಟ್ಟಾರಿ ಗೆಲುವು
ಬಡಗಬೆಳ್ಳೂರು ಗ್ರಾಮಪಂಚಾಯತ್ ಬಾಲಿಕೆಬಟ್ಟಾಜೆ ವಾರ್ಡ್ನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆದು, ಇಂದು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಗೆಲುವಿನ ವಿಜಯಪತಾಕೆ ಹಾರಿಸಿದೆ. ಈ ಗ್ರಾಮದಲ್ಲಿ ಒಟ್ಟು 13 ವಾರ್ಡ್ಗಳಿದ್ದು, ಇದರಲ್ಲಿ ಈಗಾಗಲೇ ಬಿಜೆಪಿ 9 ಸ್ಥಾನಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದಿದೆ. ಆದರೆ ಕಾಂಗ್ರೆಸ್ನ ಎಂ.ಎ ಹಾಜಬ್ಬ ಅವರ ಮರಣ ನಂತರ ಒಂದು ಸ್ಥಾನ ತೆರವುಗೊಂಡಿದೆ. ಇದೀಗ ಆ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಬಡಗಬೆಳ್ಳೂರು ಮೋಹನ್ ದಾಸ್ ಕೊಟ್ಟಾರಿ ಗೆಲುವು ಸಾಧಿಸಿದ್ದಾರೆ. 477 ಮತಗಳನ್ನು ಪಡೆದು ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಬಾಲಿಕೆಬಟ್ಟಾಜೆ ವಾರ್ಡ್ನ ಬಿಜೆಪಿ ತನ್ನದಾಗಿಸಿದೆ. ಇದೀಗ ಬಿಜೆಪಿ 13 ವಾರ್ಡ್ಗಳಲ್ಲಿ 10 ವಾರ್ಡ್ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ತಾನು ಗೆದ್ದಿದ್ದ ವಾರ್ಡ್ನನ್ನು ಕಳೆದುಕೊಂಡಿದೆ. ಬಾಲಿಕೆಬಟ್ಟಾಜೆ ವಾರ್ಡ್ನಲ್ಲಿ 950 ಮತಗಳು ನಡೆದಿದೆ. ಅದರಲ್ಲಿ ಬಿಜೆಪಿ 477 ಮತ ಹಾಗೂ ಕಾಂಗ್ರೆಸ್ 459 ಮತಗಳನ್ನು ಪಡೆದಿದೆ.
ನ.23ಕ್ಕೆ ಬಡಗಬೆಳ್ಳೂರು ಗ್ರಾಮಪಂಚಾಯತ್ನ ಈ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಕಾಂಗ್ರೆಸ್ನಿಂದ ಮಹಮ್ಮದ್ ಸುಲೇಮಾನ್ ಹಾಗೂ ಬಿಜೆಪಿಯಿಂದ ಮೋಹನ್ ದಾಸ್ ಕೊಟ್ಟಾರಿ ಸ್ಪರ್ಧಿಸಿದರು. ಈ ಮೂಲಕ ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ ನಡೆದಿತ್ತು. ಇನ್ನು ಈ ಗ್ರಾಮಪಂಚಾಯತ್ನಲ್ಲಿ 1380 ಮತದಾರರಿದ್ದು, ಅದರಲ್ಲಿ ಪುರುಷರು ಒಟ್ಟು 657 ಹಾಗೂ ಮಹಿಳೆಯರು 723 ಮತದಾರರಿದ್ದಾರೆ. ಇದೀಗ ಒಂದು ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. ಬಡಗಬೆಳ್ಳೂರು ಬಾಲಿಕೆಬಟ್ಟಾಜೆ ವಾರ್ಡ್ನಲ್ಲಿ ಉಪಚುನಾವಣೆ ನಡೆಯಿತು.