ಬಾಗಲಕೋಟೆ: ಮನೆ ಮುಂದೆ ಆಟವಾಡಲು ಬಂದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ

ಇಳಕಲ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ ಮಾಡಿದೆ. ಮನೆ ಮುಂದೆ ಆಟವಾಡಲು ಬಂದ ಬಾಲಕನ ಮೇಲೆ ಶ್ವಾನ ಎರಗಿದೆ. ಬಾಲಕ ಮನೆ ಗೇಟ್ ದಾಟಿ ರಸ್ತೆಗೆ ಬರುತ್ತಿದ್ದಂತೆ, ಬೀದಿಯಲ್ಲಿ ಮಲಗಿದ್ದ ಶ್ವಾನ ಒಮ್ಮೆಲೆ ದಾಳಿ ಮಾಡಿದೆ. ಕಾಲು,ಹೊಟ್ಟೆ ಭಾಗದಲ್ಲಿ ಶ್ವಾನ ಕಚ್ಚಿದೆ.ಈ ವೇಳೆ ಬಾಲಕ ಕೆಳಗೆ ಬಿದ್ದು ಒದ್ದಾಡುತ್ತಾ ಕಿರುಚಾಡಿದ್ದಾರೆ. ತಕ್ಷಣ ಅಜ್ಜಿ ಓಡಿ ಬಂದು ನಾಯಿ ಓಡಿಸಿ ಬಾಲಕನ ರಕ್ಷಣೆ ಮಾಡಿದ್ದಾರೆ.
ನಂತರ ಬಾಲಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಇಳಕಲ್ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ. ದಾಳಿ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ ದಿನಗಳ ಹಿಂದೆಯೂ ಇತರೆ ಮಕ್ಕಳ ಮೇಲೆಯೂ ಈ ಶ್ವಾನಗಳು ದಾಳಿ ಂಡಿದೆ. ಇದೀಗ ಮತ್ತೆ ಇದರ ಕಾಟ ಹೆಚ್ಚಾಗಿದೆ. ಈ ಬಗ್ಗೆ ಇಳಕಲ್ ನಗರಸಭೆ ಕಾರ್ಯಚರಣೆ ಮಾಡಿ. ಇದಕ್ಕೆ ಮುಕ್ತಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.