ನ.24,25 ರಂದು ಕಾರ್ಮಿಕರ ರಾಜ್ಯ ಸಮ್ಮೇಳನ
ಬಂಟ್ವಾಳ: ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನವು ನ.24 ಮತ್ತು 25 ರಂದು ಬಿ.ಸಿ.ರೋಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಎಐಸಿಸಿಟಿಯು ರಾಜ್ಯ ಪ್ರ.ಕಾರ್ಯದರ್ಶಿಪಿ.ಪಿ.ಅಪ್ಪಣ್ಣ ಅವರು ತಿಳಿಸಿದ್ದಾರೆ.
ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ನ.24 ರಂದು ಬೆ.10 ಗಂಟೆಗೆ ಬಿ.ಸಿ.ರೋಡಿನ ಕೈಕಂಬದಿಂದ ಕಾರ್ಮಿಕರ ಬೃಹತ್ ಜಾಥ ನಢಯಲಿದ್ದು,ಬಳಿಕ ಅಂಬೇಡ್ಕರ್ ಭವನದಲ್ಲಿ ಬಹಿರಂಗ ಸಭೆ,ಪ್ರತಿನಿಧಿಗಳ ಅಧಿವೇಶನವು ನಡೆಯಲಿದೆ ಎಂದರು.
ಈಸಮ್ಮೇಳನದಲ್ಲಿಕಾರ್ಮಿಕ,ರೈತ,ದಲಿತ,ಮಹಿಳಾ,ಪ್ರಗತಿಪರಸಂಘಟನೆಗಳಪ್ರತಿನಿಧಿಗಳು,ಪೌರಕಾರ್ಮಿಕರು,ಬೀದಿಬದಿ ವ್ಯಾಪಾರಿಗಳು,ಬಿಸಿ ಊಟ,ಆಸ್ಪತ್ರೆ,ವಿವಿಧ ಪ್ಯಾಕ್ಟರಿ ಕಾರ್ಮಿಕರು,ಚಾಲಕ ಸಮುದಾಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಮೈತ್ರೇಯಿ ಕೃಷ್ಣನ್,ರಾಮಣ್ಣ ವಿಟ್ಲ,ನಾಗರಾಜ್ ಪೂಜಾರ್,ತುಳಸೀದಾಸ್ ಆರ್.ಉಪಸ್ಥಿತರಿದ್ದರು.