ಗದಗ: ಜೀವನದಲ್ಲಿ ಜಿಗುಪ್ಸೆ; ಖಾಸಗಿ ಶಿಕ್ಷಣ ಸಂಸ್ಥೆಯ ನೌಕರ ಆತ್ಮಹತ್ಯೆ
ಗದಗ: ಜೀವನದಲ್ಲಿ ಜಿಗುಪ್ಸೆ ಕಂಡು ಖಾಸಗಿ ಶಿಕ್ಷಣ ಸಂಸ್ಥೆಯ ನೌಕರ ಆತ್ಮಹತ್ಯೆ ಮಾಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಪ್ರದೇಶದ ಮನೆಯಲ್ಲಿ ನಡೆದಿದೆ. ಗದಗ ನಗರದ ಡಿಜಿಎಮ್ ಆಯುರ್ವೇದ ಕಾಲೇಜಿನ ನೌಕರ ಮೊಹಮದ್ ಸೈಫ್ ಅಲಿ (30) ಎಂದು ಹೇಳಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರ ನಿವಾಸಿ. ಮೊಹಮದ್ ಸೈಫ್ ಅಲಿ ಇತ್ತಿಚೆಗೆ ತಂಗಿಯ ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಗುವಿನ ಸಾವಿನಿಂದ ತೀವ್ರವಾಗಿ ಮನನೊಂದು ಮನೆಯಲ್ಲಿ ಮೊಹಮದ್ ಸೈಫ್ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.