ಚಿಕ್ಕಬಳ್ಳಾಪುರ: ಬೆಳ್ಳುಳ್ಳಿಗೆ ಚಿನ್ನದ ಬೆಲೆ: 60 ಕೆ.ಜಿ ಬೆಳ್ಳುಳ್ಳಿ ಕಳ್ಳತನ, ತಗ್ಲಾಕೊಂಡ ಚಾಲಕ

ಬೆಳ್ಳುಳ್ಳಿಗೆ ಚಿನ್ನದ ಬೆಲೆಯಾಗಿದೆ. ಇದೀಗ ಇದನ್ನೇ ಅಸ್ತ್ರವಾಗಿಸಿಕೊಂಡು ಕಳ್ಳರು ಕಳ್ಳತನ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬೆಳ್ಳುಳ್ಳಿ ಕಳ್ಳತನ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಸಂತೆ ಮಾರುಕಟ್ಟೆಯಲ್ಲಿ 60 ಕೆ.ಜಿ ಬೆಳ್ಳುಳ್ಳಿ ಕಳ್ಳತನ ಮಾಡಲಾಗಿದೆ. ಬೆಳ್ಳುಳ್ಳಿ ಖರೀದಿ ನೆಪದಲ್ಲಿ ಹತ್ತು ಕೆ.ಜಿ ಯ ಕವರ್ಗಳಲ್ಲಿ ಕಳ್ಳತನ ಮಾಡಲಾಗಿದೆ. ಬೆಳ್ಳುಳ್ಳಿಗಳನ್ನು ಚೀಲಗಳಿಗೆ ತುಂಬಿಸಿ ನಂತರ ಈರುಳ್ಳಿ ತುಂಬುವಾಗ ಕಳ್ಳತನ ಮಾಡಲಾಗಿದೆ.
ಈರುಳ್ಳಿಯೂ ಬೇಕು ಚೀಲಗಳಿಗೆ ತುಂಬುವಂತೆ ಹೇಳಿ ಬೆಳ್ಳುಳ್ಳಿ ಕಳ್ಳತನ ಮಾಡಲಾಗಿದೆ. ಟಾಟಾ ಏಸ್ ವಾಹನದಲ್ಲಿ ಬೆಳ್ಳುಳ್ಳಿ ತುಂಬಿ ಅಂತ ಬೇರೊಂದು ಆಟೋದಲ್ಲಿ ತೆಗೆದುಕೊಂಡು ಹೋಗಿದ್ದಾರೆ, ಕೆ.ಜಿ ಬೆಳ್ಳುಳ್ಳಿಗೆ ಚಿಕ್ಕಬಳ್ಳಾಪುರದಲ್ಲಿ 450 ರೂಪಾಯಿ ಯಿಂದ 500 ರೂಪಾಯಿ ಬೆಲೆ. ಬೆಳ್ಳುಳ್ಳಿ ತುಂಬಿಕೊಂಡು ಹೋಗಲು ಬಂದಿದ್ದ ಟಾಟಾ ಏಸ್ ಚಾಲಕನ್ನು ಹಿಡಿದು ತರಾಟೆಗೊಂಡಿದ್ದಾರೆ.
ನನಗೂ ಬೆಳ್ಳುಳ್ಳಿ ತೆಗೆದುಕೊಂಡು ಹೋದವರಿಗೂ ಸಂಬಂಧವಿಲ್ಲ ಎಂದ ಚಾಲಕ ಜಾವೀದ್ ಹೇಳಿದ್ದಾನೆ. ಬಾಡಿಗೆ ಬಂದಿರುವುದಾಗಿ ಚಾಲಕ ಹೇಳಿದ್ದಾನೆ. ಬೆಳ್ಳೋಳ್ಳಿ ಕಳ್ಳತನ ಜೊತೆ ಚಾಲಕನೂ ಶಾಮೀಲು ಆಗಿದ್ದಾನೆ ಎಂದು ಆರೋಪಿಸಲಾಗಿದೆ. ಕೊನೆಗೆ ಬೆಳ್ಳೋಳ್ಳಿಯ ಹಣ ಕಟ್ಟಿಕೊಡುವಂತೆ ಚಾಲಕನನ್ನು ಕೂಡಿಯಾಕಿದ್ದಾರೆ. ಟಾಟಾ ಏಸ್ ಮಾಲಿಕ ಬೆಳ್ಳೋಳ್ಳಿ ಅಸಲು ಬೆಲೆ ಕಟ್ಟಿಕೊಡಲು ಒಪ್ಪಿಕೊಂಡಿದ್ದಾನೆ. ಪೋನ್ ಪೇ ಮೂಲಕ ಹಣ ಹಾಕಿದ ನಂತರ ಚಾಲಕನನ್ನು ಬಿಟ್ಟಿದ್ದಾರೆ.