Published On: Thu, Nov 14th, 2024

ಪ್ರತಿಭಾ ಕಾರಂಜಿ: ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಬಂಟ್ವಾಳ: ಅಳಿಕೆ ಸತ್ಯ ಸಾಯಿ ಲೋಕಸೇವಾ ಪ್ರೌಧಶಾಲೆಯಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ, ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.


ಪ್ರೌಢ ಶಾಲಾ ವಿಭಾಗದ ಗಝಲ್ ಸ್ಪರ್ಧೆಯಲ್ಲಿ ಸಿ. ಪ್ರತೀಕ್ಷಾ ಪೈ ದ್ವಿತೀಯ ಸ್ಥಾನ; 
ಪೂರ್ವಿ, ಸಹನಾ, ವೈಷ್ಣವಿ ಶೆಟ್ಟಿ, ತ್ರಿಶಾ, ಉಪೇಕ್ಷಾ , ಜೆಸ್ವಿನ್ ವಾಸ್-ಜಾನಪದ ನೃತ್ಯ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ, ಸಿ. ಪ್ರತೀಕ್ಷಾ ಪೈ, ಗಗನ್ ಪಿ. ಅಮೀನ್, ಅಪೂರ್ವ ರಾವ್, ಅದ್ವಿಕ್, ರೂಪೇಶ್ ಶೆಣೈ , ಮಧುಶ್ರೀ ಕವ್ವಾಲಿಯಲ್ಲಿ ಪ್ರಥಮ;
ನಿಶ್ಚಲ್ – ರಂಗೋಲಿ ಪ್ರಥಮ;
ಶ್ರಿಯಾ ವಿ ಭಟ್ ಸಂಸ್ಕೃತ ಭಾಷಣ – ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಾಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ, ಮೇಘನಾ ರಾವ್- ಭಕ್ತಿಗೀತೆಯಲ್ಲಿ ಪ್ರಥಮ;
ದೃಶ್ಯ – ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ;
ಕಾವನಿ ಶೆಟ್ಟಿ- ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter