ಗದಗ: ಅತ್ಯಂತ ವಿಷಕಾರಿ ಹಾವಿನ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಗಳು
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ಬಳಿ ಡಿ.ಎ.ಆರ್ ಕ್ವಾರ್ಟರ್ಸ್ ನಲ್ಲಿ, ಅತ್ಯಂತ ವಿಷಕಾರಿ ಹಾವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಡಿ.ಎ.ಆರ್ ಕ್ವಾರ್ಟರ್ಸ್ ಗೆ ವಿಷಕಾರಿ ಹಾವು ಬಂದಿತ್ತು. ರಸೆಲ್ ವೈಫರ್ ಮೂಲಕ ಹಾವಿನ ರಕ್ಷಣೆ ಮಾಡಲಾಗಿದೆ. ಡಿ.ಎ.ಆರ್ ಪಿಎಸ್ಐ ಹಾಗೂ ಸಿಬ್ಬಂದಿ ಸೇರಿ ಗೋಣಿಚೀಲದಲ್ಲಿ ಹಾವಿನ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡುವ ವೇಳೆ ಪೊಲೀಸರ ಮೇಲೆಯೇ ಈ ಹಾವು ದಾಳಿ ಮಾಡಿದೆ. ನಾಗರಹಾವಿಗಿಂತಲೂ ನಾಲ್ಕು ಪಟ್ಟು ವಿಷಕಾರಿ ಹಾವು ಎಂದು ಹೇಳಲಾಗಿದೆ. ಹಾವುವನ್ನು ರಕ್ಷಣೆ ಮಾಡಿ ದೂರದ ಬೆಟ್ಟದಲ್ಲಿ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.