ವಿಜಯಪುರ: ಕಬ್ಬು ತುಂಬಿದ ಟ್ರಾಕ್ಟರ್ ಬೈಕ್ ಮೇಲೆ ಉರುಳಿ ಬಿದ್ದು ಬೈಕ್ ಸವಾರ ಸಾವು
ಕಬ್ಬು ತುಂಬಿದ ಟ್ರಾಕ್ಟರ್ ಬೈಕ್ ಮೇಲೆ ಉರುಳಿ ಬಿದ್ದು ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮದ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೃತ ಬೈಕ್ ಸವಾರ ಸಂಗಮೇಶ ಚಲವಾದಿ (35) ಎಂದು ಗುರುತಿಸಲಾಗಿದೆ.
ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿದ್ದ ಸಂಗಮೇಶ, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರ್ಖಾನೆಯತ್ತ ಟ್ರಾಕ್ಟರ್ ಹೊರಟಿತ್ತು. ಕಬ್ಬು ತುಂಬಿದ ಟ್ರಾಕ್ಟರ್ ಕಂಡು ರಸ್ತೆ ಪಕ್ಕ ಬೈಕ್ ನಿಲ್ಲಿಸಿ ನಿಂತಿದ್ದ ಸಂಗಮೇಶ ಮೇಲೆ ಆಯತಪ್ಪಿ ಟ್ರ್ಯಾಕ್ಟರ್ ಬಿದ್ದಿದೆ. ಪರಿಣಾಮ ಆತ ಕಬ್ಬಿನ ಕೆಳಗೆ ಸಿಕ್ಕು ಮೃತ ಪಟ್ಟಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.