ಪಚ್ಚನಾಡಿ ಪೌರ ಕಾರ್ಮಿಕರಿಗೆ ಸೀರೆ ಹಂಚಿಕೆ
ಕೈಕಂಬ : ಪದವಿನಂಗಡಿಯ ಪ್ರಥ್ವಿ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಮುತ್ತೂಟ್ ಫೈನಾನ್ಸ್ ಜಂಟಿಯಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಪಚ್ಚನಾಡಿಯ ಪೌರ ಕಾರ್ಮಿಕರಿಗೆ ಸೀರೆ, ಸಿಹಿತಿಂಡಿ ಪೊಟ್ಟಣ ಹಂಚಿ ಸಂಭ್ರಮಿಸಿತು.
ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದ ಬಸವಲಿಂಗಪ್ಪನಗರದ ಪೌರ ಕಾರ್ಮಿಕ ಕುಟುಂಬ ಹಾಗೂ ಚಿಂದಿ ಆಯುವ ಕುಟುಂಬವು ಸೇರಿ ಸುಮಾರು ೫೦ ಕುಟುಂಬ ಸದಸ್ಯರಿಗೆ ಫೈನಾನ್ಸ್ ವತಿಯಿಂದ ಸಿಹಿ ತಿಂಡಿ ಪೊಟ್ಟಣ ವಿತರಿಸಿದರೆ, ಪ್ರಥ್ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೫೦ ಕುಟುಂಬಗಳಿಗೆ ಸೀರೆ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಫೈನಾನ್ಸ್ನ ಪ್ರಸಾದ್ ಹಾಗೂ ಇತರ ಸಿಬ್ಬಂದಿ, ಪ್ರಥ್ವಿ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಲೋಲಾ ಫೆರ್ನಾಂಡಿಸ್(ಲೋಲಾ ಸಾಲ್ಯಾನ್), ಸಮಾಜ ಸೇವಕ ಮೋಹನ್ ಪಚ್ಚನಾಡಿ, ಜಯಕರ್ ಬಸವಲಿಂಗಪ್ಪನಗರ ಮತ್ತು ಬಸವಲಿಂಗಪ್ಪನಗರದ ನಿವಾಸಿಗರು ಪಾಲ್ಗೊಂಡಿದ್ದರು.
ಟ್ರಸ್ಟ್ನ ಸದಸ್ಯರಾದ ಆಲ್ಬನ್, ಐವನ್, ಉಷಾ, ಪ್ರಭಾಕರ, ಪ್ರವೀಣ್ ಕೊಟ್ಟಾರಿ, ನಿಶಿತಾ, ನಿರ್ಮಲಾ ಮತ್ತು ಸುಮನಾ ಉಪಸ್ಥಿತರಿದ್ದರು. ಲೋಲಾ ಸಾಲ್ಯಾನ್ ನಿರೂಪಿಸಿದರು. ಮೋಹನ್ ಪಚ್ಚನಾಡಿ ಸಹಕರಿಸಿದರು.