Published On: Fri, Nov 1st, 2024

ಪೊಳಲಿ: ದೀಪಾವಳಿ ಹಬ್ಬದ ಪ್ರಯುಕ್ತ ರಾಜರಾಜೇಶ್ವರಿ ಕ್ಷೇತ್ರದಲ್ಲಿ ದೀಪೋತ್ಸವ ಮತ್ತು ಕುಣಿತ ಭಜನಾ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್

ಪೊಳಲಿ: ದೇಶದಲ್ಲಿ ದೀಪಾವಳಿ ಸಂಭ್ರಮದ ಮನೆ ಮಾಡಿದೆ. ಅದರಲ್ಲೂ ಕರ್ನಾಟಕದಲ್ಲಿ ಭಾರೀ ಅದ್ದೂರಿಯಾಗಿ ನಡೆಯುತ್ತದೆ. ಈ ದೀಪಾವಳಿ ದಕ್ಷಿಣ ಕನ್ನಡದಲ್ಲಿ ಮಹತ್ವದ ಇದೆ. ಎಲ್ಲ ದೇಗುಲದಲ್ಲಿ ದೀಪಾವಳಿ ವಿಶೇಷವಾಗಿರುತ್ತದೆ. ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ವತಿಯಿಂದ ಐದನೇ ವರ್ಷದ ಮೂರು ದಿನಗಳ ದೀಪೋತ್ಸವ ಮತ್ತು ಕುಣಿತ ಭಜನಾ ಕಾರ್ಯಕ್ರಮ‌ದ ಮೊದಲ ದಿನದ ಕಾರ್ಯಕ್ರಮ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.

ಈ ಅದ್ಧೂರಿ ಕಾರ್ಯಕ್ರಮಕ್ಕೆ ಶಾಸಕರಾದ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು, ಮಂಗಳೂರು ಶಾಸಕ ಡಾ. ವೈ ಭರತ್ ಶೆಟ್ಟಿ, ಪ್ರಶಾಂತ್ ಕಾಜವ, ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಕಳೆದ ಐದು ವರ್ಷಗಳಿಂದ ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ಸಂಸ್ಥಾಪಕ ಸಂತೋಷ್ ಪೊಳಲಿ ಹಾಗೂ ಅವರ ತಂಡದ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ದೀಪೋತ್ಸವ ಮಾತ್ರವಲ್ಲದೆ ಇತರ ಸಂಧರ್ಭದಲ್ಲಿ ಅಶಕ್ತರಿಗೆ ನೆರವಾಗುವಂತಹ ಸಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ನಿಜಕ್ಕೂ ಇದು ಶ್ಲಾಘನೀಯ ಕಾರ್ಯ ಇಂತಹ ಕಾರ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಈ ತಂಡದ ಮೂಲಕ ಆಗಲಿ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಶಾಂತ್ ಕಾಜಾವ, ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ಸಂಸ್ಥಾಪಕ ಸಂತೋಷ್ ಪೊಳಲಿ, ಸುನೀಲ್‌ ಪೊಳಲಿ ಹಿಂದೂ ಮುಖಂಡ ಸತ್ಯಜೀತ್ ಸುರತ್ಕಲ್, ವಿಜೇಶ್ ನಾಯ್ಕ್ ಮುಡಿಪು, ವೆಂಕಟೇಶ್ ನಾವಡ, ಜನಾರ್ಧನ ಶೆಟ್ಟಿ ಪುಂಚಮೆ, ಸುಕೇಶ್‌ ಚೌಟ ಬಡಕಬೈಲ್‌ ಮುಂತಾದವರು ಇದ್ದರು. ನಂತರ ಮಹಾಪೂಜೆ ದೊಡ್ಡರಂಗಪೂಜೆ, ಬಲಿಉತ್ಸವ ಗಾಯತ್ರಿಪೂಜೆ ನೆರವೇರಿತು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ , ವೆಂಕಟೇಶ್‌ ತಂತ್ರೀ, ಅರ್ಚಕರಾದ ನಾರಾಯಣ ಭಟ್, ಪದ್ಮಾನಾಭ, ಭಟ್, ಅನಂತ್ ಭಟ್, ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುoಜೆ ಗುತ್ತು, ಅನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಅನುವoಶಿಕ ಮೊಕ್ತೇಸರ ಮಾಧವ ಭಟ್ ಮುಂತಾದವರು ಇದ್ದರು. ಇದರ ಜತೆಗೆ ಕುಣಿತ ಭಜನೆಗೂ ಚಾಲನೆ ನೀಡಲಾಗಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter