ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೇಪಾವಳಿ ಪ್ರಯುಕ್ತ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ವತಿಯಿಂದ ತುಪ್ಪದ ದೀಪೋತ್ಸವ ನಡೆಯಲಿದೆ.

ಅ.20 ಸೋಮವಾರದಿಂದ ಅ.22 ಬುಧವಾರದವರೇಗೆ ಮೂರು ದಿನ ಸಂಜೆ 6.30 ರಿಂದ ತುಪ್ಪದ ದೀಪೋತ್ಸವ ನಡೆಯಲಿದೆ.
ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಇವರು ಸೇವಾ ರೂಪದಲ್ಲಿ ದೀಪಾವಳಿ ಸಂದರ್ಭ 6 ಆರನೇ ವರ್ಷದ ತುಪ್ಪದ ದೀಪವನ್ನು ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತಲು ಹಣತೆ ದೀಪದೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ದೇವರ ಮಹಾಪೂಜೆಯ ನಂತರ ಭಕ್ತಾಧಿಗಳಿಗೆ ಅನ್ನಪ್ರಸಾದ ಜರಗಲಿದೆ
