SPYSS ಕರ್ನಾಟಕ ವತಿಯಿಂದ ಉಳಿಪಾಡಿ ಗುತ್ತು ಒಡ್ಡೂರು ಫಾರ್ಮ್ಸ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ
SPYSS ಕರ್ನಾಟಕ (ಎಸ್ ಪಿ ವೈ ಎಸ್ ಎಸ್) ವತಿಯಿಂದ ಪೊಳಲಿ ನಗರದ ಗಂಜಿಮಠ ಉಳಿಪಾಡಿ ಗುತ್ತು ಒಡ್ಡೂರು ಫಾರ್ಮ್ಸ್ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ಗೋವುಗಳ ಸ್ವಚ್ಛತೆ, ಗೋಪೂಜೆ ಹಾಗೂ ಯೋಗಭ್ಯಾಸ ಕಾರ್ಯಕ್ರಮ ಆದಿತ್ಯವಾರ (ನವೆಂಬರ್ 03) ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ 4.45 ರಿಂದ 7.00 ತನಕ ನಡೆಯಿತು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ರವರ ಗೌರವ ಉಪಸ್ಥಿತಿಯಲ್ಲಿ ಪುರೋಹಿತರಾದ ದೀಪಕ್ ಶರ್ಮರವರ ನೇತೃತ್ವದಲ್ಲಿ ಲಕ್ಶ್ಮೀ ಪೂಜೆ, ಕಲಶ ಪೂಜೆ ಬಳಿಕ ಗೋಪೂಜೆ ನೆರವೇರಿತು. ವಿಶ್ವಕರ್ಮ ಸೀತಾರಾಮ ಆಚಾರ್ಯರವರು ಕರ್ಣವೇದನ ಮತ್ತು ಮೂಗುತಿ ಧಾರಣೆ ನಡೆಸಿಕೊಟ್ಟರು.
ಯೋಗಭ್ಯಾಸ , ಗಣಪತಿ ನಮಸ್ಕಾರ , ವಿಷ್ಣು ನಮಸ್ಕಾರವನ್ನು ಯೋಗ ಶಿಕ್ಷಕರಾದ ಕುಮಾರ, ಜಯಶ್ರೀ, ಸ್ಮಿತಾ, ಪ್ರಾತ್ಯಕ್ಷಿತೆಯನ್ನು ದೀಪಿಕಾ, ಉಮೇಶ್, ಸೌಮ್ಯ, ಚಂದ್ರಹಾಸ ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ದೀಪಾವಳಿ ಹಾಗೂ ಗೋ ಪೂಜೆಯ ಮಹತ್ವವನ್ನು ಶಿಕ್ಷಕರಾದ ರಿತೇಶ್ ತಿಳಿಸಿದರು. ಸುಮಾರು 150 ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರದ ಪ್ರಮುಖರಾದ ಜನಾರ್ಧನ, ಸ್ಮಿತಾ ನಿತಿನ್ ಸುರೇಂದ್ರ ದೀಪ ಬೆಳಗಿಸಿದರು. ಕಾರ್ಯಕ್ರಮದ ಸಂಚಾಲಕರಾದ ನಿತಿನ್ ವಂದಿಸಿದರು ಹಾಗೂ ಶುಭಾ ಕಾರ್ಯಕ್ರಮ ನಿರೂಪಿಸಿದರು.