ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಕಲಾವಿದ ಸದಸ್ಯರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಕಲಾವಿದರಿಗಾಗಿ ಕ್ಷೇಮನಿಧಿ ಸ್ಥಾಪಿಸಿರುತ್ತೇವೆ. ಅದನ್ನು ವೃದ್ಧಿಸುವ ನಿಟ್ಟಿನಲ್ಲಿ ಇನ್ನಷ್ಟು ಮೊತ್ತವನ್ನು ಕೂಡಿಸುವ ಅವಶ್ಯಕತೆ ಇದೆ. ಆದ್ದರಿಂದ ಸದಸ್ಯರು ಸಂಘಟಿತರಾಗಿ ಒಂದು ಶ್ರೇಷ್ಠ ಉದ್ದೇಶದೊಂದಿಗೆ ಇದನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸಬೇಕು. ನಮ್ಮ ಗಮನಕ್ಕೆ ಬಂದ ಅಶಕ್ತ ಕಲಾವಿದರು ಹಾಗೂ ಅವರ ಪರಿವಾರಕ್ಕೆ ವೈದ್ಯಕೀಯ, ಶೈಕ್ಷಣಿಕ ಹಾಗೂ ಇತರ ಅವಶ್ಯಕತೆಗಳಿಗೆ ಸ್ಪಂದಿಸಿದೆ. ಕಲಾವಿದರ ಸರ್ವೋನ್ನತಿಯೇ ಪರಿಷತ್ತುವಿನ ಆಶಯವಾಗಿದೆ. ಮುಂದೆಯೂ ತನ್ನ ಧ್ಯೇಯೋದ್ದೇಶ, ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸಾರ್ಥಕ ಗೊಳಿಸುವರೆ ಕಾರ್ಯನಿರ್ವಹಿಸಿ ಸದಸ್ಯರ ಆಶಯಗಳನ್ನು ಪೂರೈಸುವಲ್ಲಿ ಶ್ರಮಿಸಲಿದೆ. ಇವೆಲ್ಲವೂಗಳನ್ನು ಕಾರ್ಯಗತ ಗೊಳಿಸಬೇಕಾದರೆ ಸದಸ್ಯರುಗಳ ಸಂಪೂರ್ಣ ಸಹಕಾರ ಅತ್ಯವಶ್ಯವಿದೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ್ರ (ರಿ.) ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾದ ೧೮ನೇ ವಾರ್ಷಿಕ ಮಹಾಸಭೆಯಲ್ಲಿ ಪರಿಷತ್ತು ಉಪಾಧ್ಯಕ್ಷರುಗಳಾದ ಕಮಲಾಕ್ಷ ಜಿ.ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಾಫಲ್ಯ, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಖಜಾಂಚಿ ಎನ್.ಪೃಥ್ವಿರಾಜ್ ಮುಂಡ್ಕೂರು, ಮಹಿಳಾ ವಿಭಾಗಧ್ಯಕ್ಷೆ ಅಮೀತಾ ಜತಿನ್ ಸೇರಿದಂತೆ ಹಿರಿಯ ಕಲಾವಿದ, ಶಂಕರ್ ನಾಯ್ಕ್ ಎಲ್ಲಾರೆ, ಪದ್ಮನಾಭ ಸಸಿಹಿತ್ಲು (ಕಲಾ ಸೌರಭ), ಬಾಲಕೃಷ್ಣ ಶೆಟ್ಟಿ (ಅಭಿನಯ ಮಂಟಪ), ಬಾಲಕೃಷ್ಣ ಶೆಟ್ಟಿ ಆಡ್ಯಾಪಾಡಿ ಡಾ| ಭರತ್‌ಕುಮಾರ್ ಪೊಲಿಪು, ವೇದಿಕೆಯಲ್ಲಿದ್ದು ಪರಿಷತ್ತು ಸಲಹಾಗಾರ ಕೆ.ಕೆ ಶೆಟ್ಟಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದ್ದು, ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಹೆಗ್ಡೆ ಮಾತನಾಡಿದರು.
ಬಹುದಿನದ ನಿರೀಕ್ಷೆಯ ಕನ್ನಡಿಗ ಕಲಾವಿದರ ಮಾಹಿತಿ ಗ್ರಂಥ ‘ಕಲಾವಿದರ ಕೈಪಿಡಿ’ ಮುದ್ರಿತಗೊಂಡು ಬಿಡುಗಡೆಯಾಗಿದ್ದು, ನೋಂದಾಯಿತ ನೂರಾರು ಕಲಾವಿದರು ತಮ್ಮ ಕೈಪಿಡಿಯನ್ನು ಪಡೆಯದಿಲ್ಲ. ಸದಸ್ಯರು ನಮ್ಮನ್ನು ಸಂಪರ್ಕಿಸಿ ತಮ್ಮ ಪ್ರತಿಯನ್ನು ಶೀಘ್ರವಾಗಿ ಪಡೆಯಬೇಕು. ಯಿರಿ. ಇದರ ಮುದ್ರಣಕ್ಕೆ ನಾವು ಕಷ್ಟ್ಟಪಟ್ಟು ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿದ್ದೇವೆ. ಅದರ ಸಾರ್ಥಕತೆಯಾದರೂ ಆಗಲಿ. ಕಲೆ ಕಲಾವಿದರನ್ನು ಉಳಿಸಿ ಬೆಳೆಸುಉದರೊಂದಿಗೆ ಯುವ ಕಲಾವಿದರಿಗೆ ಪ್ರೋತ್ಸಾಹ ಪ್ರೇರಣೆ, ಮಾನವೀಯ ಮೌಲ್ಯಗಳ ಮಾರ್ಗದರ್ಶನ ಹಾಗೂ ಪ್ರಸ್ತುತ ಸಮಾಜದಲ್ಲಿರುವ ಗೊಂದಲ ಕೊರತೆಗಳನ್ನು ಪರಿಣಾಮಕಾರಿಯಾಗಿ ತಿದ್ದುವ ಕಾರ್ಯವನ್ನು ಈ ಕಲೆಯ ಮಾಧ್ಯಮದ ಮುಖಾಂತರ ಮಾಡುವ ಒಂದು ಸಣ್ಣ ಪ್ರಯತ್ನವನ್ನುನಮ್ಮ ಪರಿಷತ್ತು ಮಾಡಲು ಕಾರ್ಯ ಪ್ರವರ್ತವಾಗಿದೆ ಎಂಬುದು ನಮ್ಮ ಆಶಯ ಎಂದೂ ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪದ್ಮನಾಭ ಸಸಿಹಿತ್ಲು, ಕುಸುಮಾ ಪೂಜಾರಿ, ಅಶೋಕ್ ಸಸಿಹಿತ್ಲು, ಜೂಲಿಯೆಟ್ ಪಿರೇರಾ, ವಾಸುದೇವ ಮಾರ್ನಾಡ್, ನವೀನ್ ಶೆಟ್ಟಿ ಇನ್ನ ಬಾಳಿಕೆ, ವಿಶೇಷ ಆಹ್ವಾನಿತರುಗಳಾದ ಬಾಲಕೃಷ್ಣ ಶೆಟ್ಟಿ, ಕೃಷ್ಣರಾಜ್ ಶೆಟ್ಟಿ, ಸುಶೀಲಾ ದೇವಾಡಿಗ, ಜಗದೀಶ್ ರಾವ್, ಆಂತರಿಕ ಲೆಕ್ಕ ಪರಿಶೋಧಕ ಜಗದೀಶ್ ಡಿ.ರೈ, ಸಲಹೆಗಾರರುಗಳಾದ ಜಯಶೀಲ ಕೆ.ಸುವರ್ಣ, ಡಾ| ಭರತಕುಮಾರ್ ಪೊಲಿಪು, ಸದಸ್ಯೆಯರಾದ ವಿಜಯಲಕ್ಷ್ಮಿ, ಶೋಭಾ ಕೋಟ್ಯಾನ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.
ಚಂದ್ರಾವತಿ ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು. ಎನ್.ಪೃಥ್ವಿರಾಜ್ ಮುಂಡ್ಕೂರು ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಜಗದೀಶ್ ಡಿ.ರೈ ಅವರನ್ನು ಲೆಕ್ಕಪರಿಶೋಧಕರಾಗಿ ಹಾಗೂ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯನ್ನು ಬಾಹ್ಯ ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ಸಭೆಯು ಆಯ್ಕೆಗೊಳಿಸಿತು. ಸದಸ್ಯರನೇಕರಲ್ಲಿನ ಕೆ.ಕೆ ಶೆಟ್ಟಿ, ಸತೀಶ್ ಎನ್.ಬಂಗೇರಾ, ತಾರಾ ಬಂಗೇರಾ, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ಜಯಶೀಲ ಕೆ.ಸುವರ್ಣ, ಕಮಲಾಕ್ಷ ಜಿ.ಸರಾಫ್, ಶ್ರೀನಿವಾಸ ಪಿ. ಸಾಫಲ್ಯ, ಭರತ್ ಕುಮಾರ್ ಪೊಲಿಪು, ಅಮೀತಾ ಜತಿನ್ ಮಾತಾನಾಡಿ ಸಲಹೆಗಳನ್ನಿತ್ತು ಸಂಘದ ಸರ್ವೋನ್ನತಿಗೆ ಹಾರೈಸಿದರು.
ಕು| ಸನ್ನಿಧಿ ಮುರಳೀಧರ್ ಪ್ರಾರ್ಥನೆ ಹಾಡಿದರು. ಇತ್ತೀಚೆಗೆ ಆಗಲಿದ ಪರಿಷತ್ತು ಸದಸ್ಯೆ, ಹಿರಿಯ ರಂಗ ಕಲಾವಿದೆ ಚಂದ್ರಪ್ರಭಾ ಸುಧಾಕರ ಉದ್ಯಾವರ ಅವರಿಗೆ ಸಭೆಯಲ್ಲಿ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯ ಲ| ಮುರಳೀಧರ್ ಹೆಗ್ಡೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು
ಚಿತ್ರ ವರದಿ : ರೋನ್ಸ್ ಬಂಟ್ವಾಳ್
