ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಎನ್.ಸಿ.ಸಿ ಘಟಕ ಮತ್ತು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
ಸಮುದ್ರ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಚೀಲ, ಬಾಟಲಿ, ಬಟ್ಟೆ ಇತ್ಯಾದಿ ಕಸಗಳನ್ನು ಹೆಕ್ಕಿ ಪ್ರತ್ಯೇಕ ಚೀಲಗಳಿಗೆ ತುಂಬಿಸಲಾಯಿತು. ನಂತರ ಸ್ಥಳೀಯರಾದ ದಯಾನಂದ ಅವರು ಪುರಸಭೆಯ ವಾಹನವನ್ನು ಸಂಪರ್ಕಿಸಿ ಕಸ ತುಂಬಿದ ಚೀಲಗಳನ್ನು ವಾಹನದಲ್ಲಿ ತುಂಬಿಸಿ ಕಳುಹಿಸಲಾಯಿತು. 
 
ವಿದ್ಯಾರ್ಥಿಗಳಿಗೆ ಮಜ್ಜಿಗೆ ವ್ಯವಸ್ಥೆಯನ್ನು ಇವರು ಮಾಡಿದರು. ಸಮುದ್ರ ತೀರಕ್ಕೆ ಹೋದಾಗ ತಮ್ಮ ರಕ್ಷಣೆ, ಮೀನುಗಾರಿಕೆಯಲ್ಲಿ ಬಳಸುವ ಮೀನಿನ ಬಲೆ ಇವುಗಳ ಬಗ್ಗೆ ಸಮುದ್ರದ ತಟ ರಕ್ಷಕರಾದ ಅಶೋಕ ಮತ್ತು ಪ್ರಕಾಶ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. 
 
 ಪ್ರೌಢಶಾಲೆಯ ಎನ್.ಸಿ.ಸಿ ಘಟಕದ ೯೩ ವಿದ್ಯಾರ್ಥಿಗಳು ಭಾಗವಹಿಸಿದರು. ಎಲ್ಲರಿಗೂ ಸೋಮೇಶ್ವರ ದೇವಸ್ಥಾನ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಎನ್.ಸಿ.ಸಿ ಪ್ರಮುಖರಾದ ಪುರುಷೋತ್ತಮ, ಸ್ಥಳೀಯರಾದ ನಾರಾಯಣ ಕುಂಪಲ, ನಾರಾಯಣ ಕಜೆ, ಶ್ರೀನಿವಾಸ, ವಿದ್ಯಾಭಾರತಿಯ ಪ್ರಾಂತ ಸೇವಾಪ್ರಮುಖ ಮರುಳಾರಾಧ್ಯ ಸ್ವಾಮಿ, ಸಹ ಸೇವಾ ಪ್ರಮುಖ ಸುರೇಶ ಜಿ, ಅಧ್ಯಾಪಕರಾದ ಜಿನ್ನಪ್ಪ, ಕುಶಾಲಪ್ಪ, ರಮ್ಯ ಮತ್ತು ಪ್ರತೀಕ್ಷಾ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *