ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ , ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ ) ದಕ್ಷಿಣ ಕನ್ನಡ ಜಿಲ್ಲೆ ,ಹಸಿರು ದಳ ಮಂಗಳೂರು ಇವರ ವತಿಯಿಂದ 10 ದಿನ 10 ಪಂಚಾಯತ್ ನಲ್ಲಿ ಪ್ಲಾಸ್ಟಿಕ್ ನಿಂದ ಮುಕ್ತಿ ನೀಡುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು

 

ಹಸಿರು ದಳ ಮಂಗಳೂರಿನ ಮುಖ್ಯಸ್ಥ ನಾಗರಾಜ್ ಬಜಾಲ್ ಮಾತನಾಡಿ, ನಾವು ಆಯ್ಕೆ ಮಾಡಿದ ಹತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಪಂಚಾಯತ್ ಆಗಿ ಪರಿವರ್ತಿಸಬೇಕು, ಬಳಸಿ ಬಿಸಾಕುವ ಬಟ್ಟೆಯಿಂದ ಚೀಲಗಳನ್ನು ತಯಾರಿಸಿ ವಿತರಿಸುವ ಮೂಲಕ ಪ್ಲಾಸ್ಟಿಕ್ ನಿಂದ ಮುಕ್ತಿ ಪಡೆಯುವ ಉದ್ದೇಶವನ್ನಿರಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ಫರಂಗಿಪೇಟೆ ಬಸ್ ತಂಗುದಾಣ ಬಳಿ ಸಾರ್ವಜನಿಕರಿಗೆ ಬಟ್ಟೆಯ ಚೀಲಗಳನ್ನ ಉಚಿತವಾಗಿ ವಿತರಿಸಲಾಯಿತು.
ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮ್ಮರ್ ಫಾರೂಕ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ ಸ್ಮೃತಿ , ಪಂಚಾಯತ್ ಉಪಾಧ್ಯಕ್ಷೆ ರುಕ್ಸಾನ ಬಾನು, ಹಸಿರುದಳ ದ ಧನುಷ್ , ಆನೇಕಲ್ ಕ್ಲಸ್ಟರ್ ಮ್ಯಾನೇಜರ್ ಚಲಪತಿ, ಅಝೀಜ್ ಪ್ರೇಮ್ ಜಿ ಯೂನಿವರ್ಸಿಟಿ ಯ. ರಾಜೇಂದ್ರ ಪ್ರಸಾದ್. ಪಂಚಾಯತ್ ಸದಸ್ಯರುಗಳಾದ ರಝಕ್ , ಶಾಫಿ , ನೆಬಿಸಾ , ರಶೀದಾ , ಸಾರಮ್ಮ , ಸಂಜೀವಿನಿ ಒಕ್ಕೊಟದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *