ಪೊಳಲಿ: ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಅಖಂಡ ಭಜನಾ ಸಪ್ತಾಹ-ಸಂಭ್ರಮದ ಸಮಾಲೋಚನಾ ಸಭೆ
ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಪೊಳಲಿ ಹಾಗೂ ಅಖಂಡ ಭಜನಾ ಸಪ್ತಾಹ -ಸಂಭ್ರಮದ ಸಮಾಲೋಚನಾ ಸಭೆಯು ನ. 11ರಂದು ಸೋಮವಾರ ಶ್ರೀ ಅಖಿಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ತಾರಾನಾಥ ಕೊಟ್ಟಾರಿ, ಅಖಂಡ ಭಜನಾ ಸಪ್ತಾಹ- ಸಂಭ್ರಮ ಕಾರ್ಯಕ್ರಮದಲ್ಲಿ ಸಂಭ್ರಮ ಹೆಚ್ಚಾಗಬೇಕಾದರೆ ತೊಡಗಿಸುವಿಕೆ ಹೆಚ್ಚಾಗಬೇಕು. ದಿನ ಹೋದಂತೆ ಉತ್ಸಾಹವು ಹೆಚ್ಚಾಗಿ ನಿತ್ಯೋತ್ಸವವಾಗಬೇಕು. ಆಗದಾಗ ಮಾತ್ರ ಭಜನೆಯನ್ನು ಸಂಭ್ರಮಿಸಲು ಸಾಧ್ಯ. ಆಮಂತ್ರಣ ಪತ್ರಿಕೆ , ಫ್ಲೆಕ್ಸ್ ಹಾಗೂ ಹ್ಯಾಂಡ್ ಬಿಲ್ ಮೂಲಕ ಪ್ರಚಾರವನ್ನು ಮಾಡಬಹುದು ಎಂದು ಹೇಳಿದರು.
ಗ್ರಾಮ ದೇವರನ್ನು ವೈಭವೀಕರಿಸುವ ಜವಾಬ್ದಾರಿಯೂ ಆ ಗ್ರಾಮದ ಗ್ರಾಮಸ್ಥರ ಮೇಲಿದೆ. ದೇವರ ಆಶೀರ್ವಾದವು ನಮ್ಮ ಮೇಲಿದ್ದರೆ ನಾವು ಅಂದುಕೊಂಡಂತಹ ಕಾರ್ಯವು ಯಶಸ್ವಿಯಾಗಲು ಸಾಧ್ಯ. ವೇದವಾಸರು ನೀಡಿದ ವೇದ ಧರ್ಮವು ವಾಸ್ಯ ಸಾಹಿತ್ಯಯಾಗಿತ್ತು. ಪುರಂದರ ದಾಸರುದಾಸ ಸಾಹಿತ್ಯದಿಂದಾಗಿ ಭಜನೆಯನ್ನು ಸುಲಭವಾಗಿ ಎಲ್ಲರಿಗೂ ಮುಟ್ಟುವಂತೆ ಮಾಡಿದರು. ದಿನನಿತ್ಯ ಬದುಕಿನಲ್ಲಿ ಹೇಗಿರಬೇಕು, ಸಮಾಜದಲ್ಲಿ ಹೇಗಿರಬೇಕೆಂದು ಭಜನೆಯಿಂದ ಕಲಿಸಲು ಸಾಧ್ಯ ಎಂದಿದ್ದಾರೆ.
ಈ ಸಭೆಯಲ್ಲಿ ಗೌರವ ಮಾರ್ಗದರ್ಶಕರಾದ ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಮಾತನಾಡಿ, ಅಖಿಲೇಶ್ವರ ದೇವಸ್ಥಾನವು ಭಾರತದಲ್ಲಿ ಎಲ್ಲಿಯೂ ಕಾಣಲು ಸಿಗುವುದಿಲ್ಲ. ಪೊಳಲಿಯಲ್ಲಿ ಮಾತ್ರ ಈ ದೇವಸ್ಥಾನವಿದೆ. ಶಿವನಿಗೆ ನಾಟ್ಯ ನೃತ್ಯ ಹಾಗೂ ಭಜನೆ ಬಹಳ ಪ್ರಿಯವಾದದ್ದು. ಈ ಹಿನ್ನಲೆಯಲ್ಲಿ 2015 ರಲ್ಲಿ ಅಖಿಲೇಶ್ವರ ಓಂಕಾರ ಭಜನಾ ಮಂಡಳಿಯನ್ನು ಪ್ರಾರಂಭೀಸಿದ್ದೆವು. ಇದೀಗ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಶುಭ ಸಂದರ್ಭದಲ್ಲಿ ಭಜನಾ ಸಪ್ತಾಹ -ಸಂಭ್ರಮ ಕಾರ್ಯಕ್ರಮವು ನಡೆಯಲಿದೆ ಎಂದರು. ನವೆಂಬರ್ 28ಕ್ಕೆ ಹೊರಕಾಣಿಕೆ ಮೆರವಣಿಗೆ, ನ. 30 ನೇ ತಾರೀಕಿನಿಂದ ಆರಂಭವಾಗಿ ಡಿ 7ರ ಸೂರ್ಯೋದಯವರೆಗೂ ಭಜನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳೆಲ್ಲರೂ ತನು, ಮನ, ಧನ ಎಲ್ಲಾ ರೀತಿಯ ಸಹಕಾರಿ ಇರಲಿ ಎಂದರು.
ಅಖಂಡ ಭಜನಾ ಸಪ್ತಾಹ ಸಂಭ್ರಮದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ರಮೇಶ್ ರಾವ್,ಕಾರ್ಯಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ನಾರಳ, ಯಶೋಧರ ಪೊಳಲಿ ಕಲ್ಕುಟ,ಪ್ರಮೀಳಾ ದೇವಾಡಿಗ, ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಅಧ್ಯಕ್ಷ ಸದಾಶಿವ ಮೊಯಿಲಿ,ಪ್ರ ಕಾರ್ಯದರ್ಶಿ ದಾಮೋಧರ ನೆತ್ತರಕೆರೆ, ಸಂಚಾಲಕ ಮುರಳಿ ಪೊಳಲಿ, ರಾಜು ಕೋಟ್ಯಾನ್, ಜನಾರ್ಧನ ಅಮ್ಮುoಜೆ ಉಪಸ್ಥಿತರಿದ್ದರು. ಈ ಸಮಾಲೋಚನಾ ಸಭೆಯಲ್ಲಿ ಎಲ್ಲಾ ಸದಸ್ಯರು ಹಾಜರಿದ್ದರು.