
ಪೊಳಲಿಯ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಕೂಟ ಮಹಾ ಜಗತ್ತು (ರಿ) ಅಂಗ ಸಂಸ್ಥೆ ಇವರ ವತಿಯಿಂದ ಸೇವಾರ್ಥವಾಗಿ ಶ್ರೀ ಕ್ಷೇತ್ರದ ಅರ್ಚಕ ವೃಂದದವರ ಸಹಕಾರದಿಂದ ಶ್ರೀ ದೇವಿಗೆ ಲಕ್ಷ ಕುಂಕುಮಾರ್ಚನೆ ಸೇವೆಯು ಜರುಗಿತು.

ಪೊಳಲಿ ಅರ್ಚಕರು ಮಾತನಾಡಿ, ಕುಂಕುಮವೂ ಬಹಳ ಪ್ರಾಧನ್ಯತೆಯನ್ನು ಹೊಂದಿದೆ.ದೇವಿಗೆ ಕುಂಕುಮಾರ್ಚನೆ ನಿತ್ಯವೂ ನಡೆಯುತ್ತದೆ .ಆದರೆ ನಿತ್ಯವೂ ವಿಶೇಷವಾದ ಅರ್ಚನೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ವಾರ್ಷಿಕವಾಗಿ ಒಮ್ಮೆಯಾದರೂ ದೇವಿಗೆ ಸಂಬಂಧ ಪಟ್ಟ ಸಹಸ್ರನಾಮ ಪಠಣೆ ಮಾಡುವುದರಿಂದ ದೇವಿಯ ಅನುಗ್ರಹ ಹಾಗೂ ಆಶೀರ್ವಾದವೂ ಸಿಗುತ್ತದೆ. ಈ ದಿನವೂ ದೇವಸ್ಥಾನದ ಆಡಳಿತ ಮಂಡಲಿಯ ಒಪ್ಪಿಗೆ ಮೇರೆಗೆ, ಅರ್ಚಕ ವೃಂದದವರು ಹಾಗೂ ಭಕ್ತಾಧಿಗಳ ಸಹಕಾರರೊಂದಿಗೆ ದೇವಿಗೆ ಲಕ್ಷ ಕುಂಕುಮಾರ್ಚನೆ ಸೇವೆಯು ನೆರವೇರಿದೆ ಎಂದರು.
