Published On: Wed, Oct 23rd, 2024

ಮಳೆಯಿಂದ ಹಾನಿಗೊಂಡ ಅಂಮ್ಮುಜೆ ಗ್ರಾಮದ ಮನೆಯ ದುರಸ್ಥಿತಿಗೆ 20000 ರೂ. ನೀಡಿದ ಧರ್ಮಸ್ಥಳ ಸಂಘ

ದಕ್ಷಿಣ ಕನ್ನಡದಲ್ಲಿ ನಿರಂತರ ಸುರಿದ ಮಳೆಯಿಂದ ಅನೇಕ ಮನೆಗಳು ಹಾನಿಯಾಗಿತ್ತು ಈ ಪೈಕಿ, ಪೊಳಲಿ ವಲಯದ ಅಂಮ್ಮುಜೆ ಗ್ರಾಮದ ಕಲಾಯಿ ಕುಬುರಾರವರ ಮನೆಯು ಕೂಡ ಹಾನಿಗೆ ಒಳಗಾಗಿತ್ತು. ಇದೀಗ ಅವರ ಮನೆಯ ದುರಸ್ಥಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 20000 ರೂಪಾಯಿ ಮೊತ್ತದ ಚೆಕ್​​​ನ್ನು ನೀಡಿದೆ. ಈ ಚೆಕ್​​ನ್ನು ಯೋಜನಾಧಿಕಾರಿ ಬಾಲಕೃಷ್ಣ M ರವರು ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಪೊಳಲಿ ವಲಯ ಅಧ್ಯಕ್ಷರು ಜನಾರ್ಧನ ಆಚಾರ್ಯ ಪುಂಚಮೆ, ವಲಯ ಮೇಲ್ವಿಚಾರಕರು ಹರಿಣಾಕ್ಷಿ, ಸೇವಾಪ್ರತಿನಿಧಿ ರತ್ನ, ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter