ಪೊಳಲಿ: ಗ್ರಾಮೀಣ ಸೊಗಡಿನ ಅನಾವರಣ, ಅದ್ದೂರಿಯಾಗಿ ನಡೆದ ಆಸರೆಡ್ ಕೆಸರ್ದ ಗೊಬ್ಬು ಕ್ರೀಡಾ ಕೂಟ
ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಆಸರೆ ಸೇವಾ ಫೌಂಡೇಶನ್ (ರಿ) ಆಶ್ರಯದಲ್ಲಿ ಆಸರೆಡ್ ಕೆಸರ್ದ ಗೊಬ್ಬು ಕ್ರೀಡಾ ಕೂಟವು ಅಕ್ಟೋಬರ್ 20 ಭಾನುವಾರದಂದು ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಮಾನ್ಯ ಸಚಿವರಾದ ಬಿ. ರಮನಾಥ ರೈ ಹಾಗೂ ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯನಂದ ಸ್ವಾಮೀಜಿಯವರು ಉದ್ಘಾಟಿಸಿದರು. ಕೆಸರುಗದ್ದೆ ಉದ್ಘಾಟನೆಯನ್ನು ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು, ಬೆಳ್ಳೂರು ಪ್ರಗತಿಪರ ಕೃಷಿಕರಾದ ನಿರಂಜನ ಸೇಮಿತರು ನೆರವೇರಿಸಿ ಈ ಕೂಟಕ್ಕೆ ಚಾಲನೆ ನೀಡಿದರು.
ಆಸರೆಡ್ ಕೆಸರ್ದ ಗೊಬ್ಬು ಕ್ರೀಡಾ ಕೂಟದಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ತಿರುವು ಓಟ, ವಾಲಿಬಾಲ್, ಹಗ್ಗ ಜಗ್ಗಾಟ, ನಿಧಿ ಶೋಧ, ತಪ್ಪಂಗಾಯಿ, ಕಂಬಕ್ಕೆ ಹತ್ತುವ ಸ್ಪರ್ಧೆ, ತೆಂಗಿನ ಗರಿ ಹೆಣೆಯುವುದು, ಮುಡಿ ಕಟ್ಟುವುದು ಸೇರಿದಂತೆ ಗ್ರಾಮೀಣ ಭಾಗದ ಜನರ ಜೀವನಕ್ಕೆ ಒತ್ತು ನೀಡುವಂತಹ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ಮೂರು ಸೇರು ಅಕ್ಕಿ, ದ್ವಿತೀಯ ಬಹುಮಾನವಾಗಿ ಎರಡು ಸೇರು ಅಕ್ಕಿಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಧಾ, ಚಲನಚಿತ್ರ ನಟಿ ಕುಮಾರಿ, ಸಪ್ತಾ ಪಾವೂರು, ಪ್ರಗತಿ ಪರ ಕೃಷಿಕ ಚಂದ್ರಪ್ಪ ಕುಲಾಲ್ ಕೊಲೈ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕೃಷಿಕರು ಹಾಗೂ ಮಿಲಿಟರಿ ಗದ್ದೆ ಮಾಲೀಕರಾದ ಸುಬ್ಬರಾವ್ ಪುಂಚಮೆ, ಭುವನೇಶ್ ಪಚ್ಚಿನಡ್ಕ, ಕೃಷಿಕ ಚಾಲ್ಸ್ ಡಿಸೋಜ, ಬಡಗ ಬೆಳ್ಳೂರು ವಲಯ ಬಂಟರ ಸಂಘದ ಅಧ್ಯಕ್ಷ ಜನಾರ್ಧನ್ ಶೆಟ್ಟಿ, ಬಡಗ ಬೆಳ್ಳೂರಿನ ಪಂಚಗ್ರಾಮ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ್ ಪೂಜಾರಿ, ಕಿನ್ನಿಕಂಬಳ ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಕೆ ಉಮೇಶ್ ಆಚಾರ್ಯ ಮತ್ತಿತ್ತರರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಾಲಚಂದ್ರಶೆಟ್ಟಿ ಪಲ್ಲಿಪಾಡಿ,ಚೆನ್ನಪ್ಪ ಪೂಜಾರಿ ಬಡಕಬೈಲು,ಸಾರಮ್ಮ ಕುಟ್ಟಿಕಲ,ವಾಸುದೇವ ಮಾಸ್ಟ್ರು ಪೊಳಲಿ,ಕು.ಮಾನ್ಯ ದೇವಾಡಿಗ ಪೊಳಲಿ,ಗೌರಿ ಬಡಕಬೈಲು,ಕೃಷ್ಣಕುಮಾರ್ ಪೂಂಜ ಫರಂಗಿಪೇಟೆ,ಭೂಷಣ್ ಕಲ್ಕಟ,ತ್ರಿಶಾನ್ ಅಮೀನ್ ಪುಂಚಮೆ ಅವರನ್ನು ಸನ್ಮಾನಿಸಲಾಯಿತು.
ಆಸರೆ ಸೇವಾ ಫೌಂಡೇಶನ್ ಗೌರವಧ್ಯಕ್ಷ ರಾಜು ಪಲ್ಲಿಪಾಡಿ ಅಭಿನಂದನಾ ಪತ್ರ ವಾಚಿಸಿದರು.
ಅದೇರೀತಿ ಎಸ್ ಎಸ್ ಎಲ್ ಸಿಯಲ್ಲಿಅತ್ಯಧಿಕ ಅಂಕಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.ಹಾಗೂ ಅಶಕ್ತರಿಗೆ ಸಹಾಯಧನ,ವಿಕಲಚೇತನರಿಗೆ ಕೃತಕ ಕಾಲು ವಿತರಣೆಯು ನಡೆಯಿತು.
ಬಳಿಕ ಕೆಸರುಗದ್ದೆಯಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ಕೆಸರುಗದ್ದೆಯಲ್ಲಿ ಓಟ, ಮಡಕೆ ಒಡೆಯುವುದು, ತಿರುವು ಓಟ, ವಾಲಿಬಾಲ್, ಹಗ್ಗ ಜಗ್ಗಾಟ, ನಿಧಿ ಶೋಧ, ತಪ್ಪಂಗಾಯಿ, ಕಂಬಕ್ಕೆ ಹತ್ತುವ ಸ್ಪರ್ಧೆ, ತೆಂಗಿನ ಗರಿ ಹೆಣೆಯುವುದು, ಮುಡಿ ಕಟ್ಟುವುದು ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ವಿಜೇತರಿಗೆ ಪ್ರಥಮ ಬಹುಮಾನವಾಗಿ ಮೂರು ಸೇರು ಅಕ್ಕಿ, ದ್ವಿತೀಯ ಎರಡು ಸೇರು ಅಕ್ಕಿಯನ್ನು ವಿತರಿಸಲಾಯಿತು.
ಫೌಂಡೇಶನ್ ನ ಪದಾಧಿಕಾರಿಗಳಾದ ಬಶೀರ್ ಗಾಣೆಮಾರ್,ರೋಶನ್ ಪುಂಚಮೆ,ಪ್ರಸಾದ್ ಗರೋಡಿ,ಟ್ರಸ್ಟಿಗಳಾದ ರಾಜು ಕೋಟ್ಯಾನ್,ಲಕ್ಷ್ಮೀಶ್ ಶೆಟ್ಟಿ, ಪ್ರೇಮನಾಥ ಚೇರ,ಮಹಮ್ಮದ್ ಮುಸ್ತಾಫ,ಇಬ್ರಾಹಿಂ ನವಾಜ್ , ವೀಣಾ ಉಪೇಂದ್ರ ಆಚಾರ್ಯ, ಪ್ರಸಾದ್ , ಮಾದಲಾದವರು ವೇದಿಕೆಯಲ್ಲಿದ್ದರು. ಫೌಂಡೇಶನ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಕೆಕೆ ಪೇಜಾವರ ಹಾಗೂ ವಿಜೆ ಮನೋಜ್ ವಾಮಂಜೂರ್ ನಿರೂಪಿಸಿದರು.