ಪೊಳಲಿಯ ಶ್ರೀ ವಿದ್ಯಾವಿಲಾಸ ಶಾಲೆ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನ ನೀಡಿದ ಧರ್ಮಸ್ಥಳ
ಪೊಳಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೊಳಲಿಯ ಶ್ರೀ ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ 2 ಲಕ್ಷದವರೆಗೆ ಹಾಗೂ ಅಮ್ಮಂಜೆ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 1 50 ಲಕ್ಷ ಅನುದಾನವನ್ನು ಅ.10ರಂದು ಗುರುವಾರ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಎಂ ಅವರು ಚಕ್ ಹಸ್ತಾಂತರಿಸಿದರು.
ಈ ಮೂಲಕ ಗ್ರಾಮದ ಅಭಿವೃದ್ಧಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿದೆ. ನೂರಾರು ಗ್ರಾಮಗಳಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಸಹಾಯವನ್ನು ಮಾಡಿದೆ. ಒಂದು ಗ್ರಾಮದ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ ಎನ್ನುವ ಮಾತಿನಂತೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಈ ಕಾರ್ಯದಲ್ಲಿ ತೊಡಗಿಕೊಂಡಿದೆ.
ಇನ್ನು ಈ ಬಗ್ಗೆ ಪೊಳಲಿಯಲ್ಲಿ ಸಂವಾದ ಸಭೆಯನ್ನು ನಡೆಸಲಾಗಿತ್ತು ಈ ವೇಳೆ ಮಾತನಾಡಿದ ಬಂಟ್ವಾಳದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸುಮಾರು 62 ಲಕ್ಷದ 42 ಸಾವಿರ ಸುಜ್ಞಾನ ನಿಧಿಯನ್ನು ನೀಡಲಾಗುತ್ತಿದೆ. ಇದುವರೆಗೂ 1531 ಮಂದಿಗೆ 1 ಕೋಟಿ 76 ಸಾವಿರ ಅನುದಾನವನ್ನು ನೀಡಲಾಗಿದೆ. ಇದರ ಜತೆಗೆ ಜಲಮಂಡಲ ಕಾರ್ಯಕ್ರಮಕ್ಕೂ ಕೂಡ ಹೆಚ್ಚಿನ ಅನುದಾನ ನೀಡಲಾಗಿದೆ.
ರಾಜ್ಯದ ಅನೇಕ ಜನರು ಧರ್ಮಸ್ಥಳಕ್ಕೆ ಬಂದು ತಮ್ಮಕಷ್ಟಗಳನ್ನು ಹೇಳುತ್ತಾರೆ. ಅಲ್ಲಿ ಬಂದ ಜನರಿಗೆ ಯಾವತ್ತೂ ಇಲ್ಲ ಎಂದು ಹೇಳದೆ ಅವರ ಕಷ್ಟಕ್ಕೆ ಸ್ಪಂಧಿಸುವ ಕೆಲಸವನ್ನು ಕ್ಷೇತ್ರದ ಕಾವಂದರು ಮಾಡುತ್ತಾರೆ ಎಂದು ಬಾಲಕೃಷ್ಣ ಎಂ ಹೇಳಿದರು.
ಶಾಲೆಯ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರದಿಂದ 2 ಲಕ್ಷ ರೂ. ಅಲ್ಲದೇ ಬಂಟ್ವಾಳ ತಾಲೂಕಿನಲ್ಲಿ ಹಲವು ಜೀರ್ಣೋದ್ಧಾರ ಗೊಂಡ ದೇವಸ್ಥಾನಗಳಿಗೂ ,ಹಾಲು ಉತ್ಪಾದಕ ಸಂಘಗಳಿಗೆ ಅಂಚೆ ಕಚೇರಿ, ಜನ ಮಂಗಳ ಕಾರ್ಯಕ್ರಮ, ಹಿಂದೂ ರುದ್ರಭೂಮಿಗಳಿಗೆ, ಶೌಚಾಲಯ ನಿರ್ಮಾಣ, ವಿದ್ಯಾರ್ಥಿಗಳಿಗೆ ಸಹಾಯಧನಗಳನ್ನು ಕೂಡ ನೀಡಲಾಗಿದೆ. ಅಲ್ಲದೇ ಶಿಕ್ಷಕರ ಕೊರತೆ ಇದ್ದ ಶಾಲೆಗೆ ಶಿಕ್ಷಕರನ್ನು ನೇಮಿಸಲಾಗಿದೆ.
ಈಸಂದರ್ಭದಲ್ಲಿ ಪೊಳಲಿ ವಲಯದ ಮೇಲ್ವಿಚಾರಕರಾದ ಹರಿನಾಕ್ಷಿ ಅಮ್ಮುಂಜೆ ಒಕ್ಕೂಟದ ಅಧ್ಯಕ್ಷ ಸುಂದರ ಪೂಜಾರಿ, ಕರಿಯಂಗಳ ಒಕ್ಕೂಟದ ಅಧ್ಯಕ್ಷ ಜನಾರ್ಧನ ಪುಂಚಮೆ, ವಿದ್ಯಾ ವಿಲಾಸ ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ನಿವೃತ ಮುಖ್ಯ ಶಿಕ್ಷಕ ಸುಬ್ರಾಯ ಕಾರಂತ, ಶಾಲಾಭಿವೃಧಿ ಅಧ್ಯಕ್ಷ ವೆಂಕಟೇಶ್ ನಾವಡ, ಮಾಜಿ ತಾ. ಪಂ. ಸದಸ್ಯ ಯಶವಂತ ಕೋಟ್ಯಾನ್, ಶಾಲಾ ಶಿಕ್ಷಕಿಯರು ಮೋಹನ್ ದಾಸ್, ಗೀತಾ, ರೇಖಾ, ಅಶ್ವಿನಿ, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಧೇಶಕರು ,ಕಾರ್ಯದರ್ಶಿ ರಾಮ ಮೂಲ್ಯ ಮತ್ತು ಹಾಗೂ ಒಕ್ಕೂಟದ ಸದಸ್ಯರು ಇದ್ದರು