ಪೊಳಲಿ: ದೇವಿಗೆ ಹರಕೆ ರೂಪದಲ್ಲಿ ಬಂದ ಸಾವಿರಾರು ಸೀರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿಕೆ
ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇಗುಲದಲ್ಲಿ ಸೋಮವಾರದಂದು (ಅ.7) ನವರಾತ್ರಿ ಪ್ರಯುಕ್ತ ದೇವಿಗೆ ಹರಕೆ ರೂಪದಲ್ಲಿ ಬಂದಿದ್ದ ಸಾವಿರಾರೂ ಸೀರೆಯನ್ನು ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಹಂಚಲಾಗಿತ್ತು. ಪೊಳಲಿಯಲ್ಲಿ ನವರಾತ್ರಿ ಮಹೋತ್ಸವ ನಡೆಯುತ್ತಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದಾರೆ. ಈ ವೇಳೆ ಭಕ್ತರಿಗೆ ಹರಕೆ ರೂಪದಲ್ಲಿ ಸಾವಿರಾರೂ ಸೀರೆಗಳು ಬಂದಿರುತ್ತದೆ. ಇದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗಿದೆ.
ಈ ವೇಳೆ ಪೊಳಲಿ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್ , ನಾರಯಣ ಭಟ್, ಕೆ.ರಾಮಭಟ್, ಪರಮೇಶ್ವರ ಭಟ್ , ಅನಂತ ಭಟ್ ಶಿವರಾಮ್ ಮಯ್ಯ, ಶ್ರೀಕಾಂತ್ ಮಯ್ಯ ಹಾಗೂ ಅರ್ಚಕ ವೃಂದವರ ಸಮ್ಮುಖದಲ್ಲಿ ದೇವಾಲಯದ ರಾಜಾಂಗಣದಲ್ಲಿ ಸೀರೆಯನ್ನು ಭಕ್ತರಿಗೆ ನೀಡಲಾಗಿತ್ತು.
ತಾಯಿಗೆ ಹರಕೆ ರೂಪದಲ್ಲಿ ಬಂದ ಸೀರೆಯನ್ನು ಭಕ್ತರು ಸಾಲಾಗಿ ನಿಂತು ಸ್ವೀಕರಿಸಿದರು. ಅಲ್ಲಿ ಅರ್ಚರು ಹಾಗೂ ಸಿಬ್ಬಂದಿಗಳು ಶಾಂತದಿಂದ ಸಾವಿರಾರೂ ಭಕ್ತರಿಗೆ ಸೀರೆಯನ್ನು ವಿತರಿಸಿದರು. ಇನ್ನು ದೇವಾಲಯದಲ್ಲಿ ತಾಯಿಗೆ ವಿಶೇಷ ಪೂಜೆ ಹಾಗೂ ಚಂಡಿಕಾಹೋಮಗಳು ಕೂಡ ಪ್ರತಿದಿನ ನಡೆಯುತ್ತದೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ.
ನವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು
8-10-2024 ಮಂಗಳವಾರದಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ
9-10-2024 ಬುಧವಾರದಂದು ರಾಮಕೃಷ್ಣ ತಪೋವನ ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಮೋಹನ್ ಕುಮಾರ್ ಅಮ್ಮುಂಜೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ವೀರ ಬಬ್ರುವಾಹನ – ಅಗ್ರಪೂಜೆ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ / ಬೊಕ್ಕಸ ಅವರಿಂದ ವಿಶಿಷ್ಟ ಕಾರ್ಯಕ್ರಮ ಕಲಾ ಸಂಗಮ
10-10-2024 ಗುರುವಾರದಂದು ಸುನೀತಾ ಜಯಂತ ನಾಟ್ಯ ನಿಲಯ ಉಳ್ಳಾಲ ಇವರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ, ಶ್ರೀಮತಿ ವಂದನಾ ಮೂರ್ತಿ ಬೆಂಗಳೂರು ತಂಡವರಿಂದ ಸುಗಮ ಸಂಗೀತ
11-10-2024 ಶುಕ್ರವಾರದಂದು ನವರಾತ್ರಿ ವೇಷಗಳ ಸಂಭ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ.