ಪೊಳಲಿ: ನವರಾತ್ರಿ ಪ್ರಯುಕ್ತ ಇಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಂಡಿಕಾಹೋಮ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನೆನ್ನೆಯಿಂದ (ಅ.3) ನವರಾತ್ರಿ ಮಹೋತ್ಸವ ಆರಂಭವಾಗಿದೆ. ತಾಯಿ ಈ ವೇಳೆ ವಿಶೇಷ ಪೂಜೆ ನಡೆಯಲಿದೆ. ಇದರ ಒಂದು ಭಾಗವಾಗಿ ಚಂಡಿಕಾಹೋಮ ಇಂದು (ಅ.4) ರಂದು ಶುಕ್ರವಾರ ನಡೆಯಿತು. ಇಂದಿನ ಹರಕೆಯ ಚಂಡಿಕಾಯಾಗವು ಭುವನೇಶ್ ಪಚ್ಚಿನಡ್ಕ ಅವರ ಪರವಾಗಿ ನಡೆಯಿತು. ನವರಾತ್ರಿಯ 9 ದಿನವು ಭಕ್ತರಿಂದ ಈ ಚಂಡಿಕಾಹೋಮ ನಡೆಯುತ್ತದೆ. ವಿಶೇಷವಾಗಿ ಈ ಸಂದರ್ಭದಲ್ಲಿ ತಾಯಿ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಿ ತಮ್ಮ ಲಾಭ-ನಷ್ಟ, ಸುಖ-ದುಃಖಕ್ಕೆ ಪರಿಹಾರವನ್ನು ಮಾಡಿಕೊಳ್ಳುತ್ತಾರೆ. ಇನ್ನು ಇಂದಿನ ಚಂಡಿಕಾಹೋಮವು ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್ ನೇತೃತ್ವದಲ್ಲಿ ನಾರಾಐಣ ಭಟ್, ಕೆ.ರಾಮಭಟ್, ಪರಮೇಶ್ವರ ಭಟ್ , ಅನಂತ ಭಟ್ ಶಿವರಾಮ್ ಮಯ್ಯ, ಶ್ರೀಕಾಂತ್ ಮಯ್ಯ ಹಾಗೂ ಅರ್ಚ ವೃಂದವರು ಇದ್ದರು.

ದೇಗುಲದಲ್ಲಿ ಅ.3ರಿಂದ ಅಂದರೆ ನೆನ್ನೆಯಿಂದ ನವರಾತ್ರಿ ಉತ್ಸವ ಆರಂಭವಾಗಿದೆ. ವಿಶೇಷವಾಗಿ ದೇವಿಗೆ ಭಕ್ತರಿಂದ ವಿವಿಧ ರೀತಿ ಪೂಜೆಗಳು ನಡೆಯುತ್ತದೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ನವರಾತ್ರಿ ಮಹೋತ್ಸವಕ್ಕೆ ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನವರಾತ್ರಿ ಪೂಜೆಯು ಪ್ರತೀ ನಿತ್ಯ ರಾತ್ರಿ 8:00 ಗಂಟೆಗೆ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾಹೋಮವೂ ಸೇರಿದಂತೆ ಅಕ್ಟೋಬರ್ 11 ರಂದು ಶುಕ್ರವಾರ ಮಹಾನವಮಿ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾಹೋಮವೂ ಜರಗಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.
ನವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು
4-10-2024 ಶುಕ್ರವಾರದಂದು ನಾಟ್ಯಾಲಯ ಟ್ರಸ್ಟ್ (5) ನಾಟ್ಯ ವಿಧುಷಿ ಶ್ರೀಮತಿ ಸುಮ ದಾಮೋದ ಮತ್ತು ಶಿಷ್ಯ ವೃಂದದವರಿಂದ ಸಂಗೀತ ನೃತ್ಯ ವೈಭವ ಹಾಗೂ ಮಂಗಳೂರಿನ ಖ್ಯಾತ ಸಪ್ತಸ್ವರ ಆರ್ಕೆಸ್ಟ್ರಾ ಪ್ರಭಾಕರ್ ತಣ್ಣೀರುಬಾವಿ ತಂಡದವರಿಂದ ಭಕ್ತಿ ರಸ ಮಂಜರಿ ಕಾರ್ಯಕ್ರಮ.
5-10-2024 ಶನಿವಾರದಂದು ಯಕ್ಷಕಲಾ ಪೊಳಲಿ ಇದರ 29 ವರ್ಷದ ವರ್ಷಂತುತ್ಸವದ ಅಂಗವಾಗಿ ಪೊಳಲಿ ಯಕ್ಷ ಉತ್ಸವ 2024, ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಕಚ್ಚರ ಮಾಲ್ದಿ (ತುಳು) – ಭಾರತ ರತ್ನ ಯಕ್ಷಗಾನ ಬಯಲಾಟ.
6-10-2024 ಆದಿತ್ಯವಾರದಂದು ವಿಧುಷಿ ಶ್ರೀಮತಿ ವಿದ್ಯಾ ಮನೋಜ್ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ), ಕಲ್ಲಡ್ಕ ಇವರ ಶಿಷ್ಯ ವೃಂದದವರಿಂದ ದೇವಿ ಭವತಾರಿಣಿ ಭರತನಾಟ್ಯ ಕಾರ್ಯಕ್ರಮ ಹಾಗೂ ಥಂಡರ್ ಗೈಸ್ (ರಿ) ಬಜಪೆ ತಂಡದವರಿಂದ – ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ ಕಾರ್ಯಕ್ರಮ.
07-10-2024 ಸೋಮವಾರದಂದು ಆರ್ಯಭಟ ಪ್ರಶಸ್ತಿ ಸರಸ್ಥತ ಕಥಾ ಸಾರಥಿ ತೋನ್ಸೆ ಶ್ರೀ ಪಷ್ಟಲ್ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ ಸತಿ ಸಾವಿತ್ರಿ ಹಾಗೂ ನೃತಾ ಸುಧಾ (ರಿ) ಮಂಗಳೂರು ವಿಧುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಶಿಷ್ಯೆಯರಿಂದ ನೃತ್ಯಾರ್ಪಣಂ.
8-10-2024 ಮಂಗಳವಾರದಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ
9-10-2024 ಬುಧವಾರದಂದು ರಾಮಕೃಷ್ಣ ತಪೋವನ ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಮೋಹನ್ ಕುಮಾರ್ ಅಮ್ಮುಂಜೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ವೀರ ಬಬ್ರುವಾಹನ – ಅಗ್ರಪೂಜೆ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ / ಬೊಕ್ಕಸ ಅವರಿಂದ ವಿಶಿಷ್ಟ ಕಾರ್ಯಕ್ರಮ ಕಲಾ ಸಂಗಮ
10-10-2024 ಗುರುವಾರದಂದು ಸುನೀತಾ ಜಯಂತ ನಾಟ್ಯ ನಿಲಯ ಉಳ್ಳಾಲ ಇವರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ, ಶ್ರೀಮತಿ ವಂದನಾ ಮೂರ್ತಿ ಬೆಂಗಳೂರು ತಂಡವರಿಂದ ಸುಗಮ ಸಂಗೀತ
11-10-2024 ಶುಕ್ರವಾರದಂದು ನವರಾತ್ರಿ ವೇಷಗಳ ಸಂಭ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ.