ಪೊಳಲಿಯಲ್ಲಿ ಐದನೇ ದಂಡಮಾಲೆ,78 ತುಲಾಭಾರ ಸೇವೆ
ಪೊಳಲಿ : ಸುದೀರ್ಘ ಒಂದು ತಿಂಗಳ ಕಾಲ ನಡೆಯುವ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಐದನೇ ದಂಡಮಾಲೆಯ ಬುಧವಾರದಂದು 78 ತುಲಾಭಾರ ಸೇವೆ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ
ದೇವಳದ ಅರ್ಚಕರಾದ ಮಾಧವಭಟ್, ಪರಮೇಶ್ವರ ಭಟ್, ರಾಮ್ ಭಟ್ ಹಾಗೂ ನಾರಾಯಣ ಭಟ್, ಶ್ರೀಕಾಂತ್ ಮಯ್ಯ, ವಿಷ್ಣುಮೂರ್ತಿ ನಟ್ಟೋಜ ಹಾಗೂ ದೇವಳದ ಸಿಬ್ಬಂದಿಗಳು ಹಾಗೂ ತುಲಾಭಾರ ಸೇವೆ ನೆರವೇರಿಸಿದರು. ತುಲಾಭಾರ ಸೇವಾದಾರರು ಅಕ್ಕಿ ,ತೆಂಗಿನಕಾಯಿ, ಸೀಯಾಳ,ಬೆಲ್ಲ,ಬಾಳೆಹಣ್ಣು, ಧವಸದಾನ್ಯದಿಂದ ಗಳಿಂದ ತುಲಾಭಾರ ಮಾಡಿಸಿ ಕೃತಾರ್ಥರಾದರು. ಇನ್ನು 10 ನೇ ದಂಡಮಾಲೆಯು ಮಾ.24ರಂದು ನಡೆಯಲಿದೆ.
ಮಾ. 14 ರಂದು ಕ್ಷೇತ್ರದಲ್ಲಿ ಧ್ವಜಾರೋಹಣ ಗೊಂಡಿದ್ದು, ಎ. 11ತನಕ 28ದಿನಗಳ ಕಾಲ ಪೊಳಲಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ಎ. 05 ಕೊಡಿ ಚೆಂಡು,ಕುಮಾರ ರಥ,
ಎ. 06 ಎರಡನೇ ಚೆಂಡು,ಹೂವಿನ ತೇರು,
ಎ. 07 ಮೂರನೇ ಚೆಂಡು, ಸೂರ್ಯಮಂಡಲ,ಎ. 08 ನಾಲ್ಕನೇ ಚೆಂಡು,ಚಂದ್ರಮಂಡಲ,
ಎ. 09 ಕಡೇ ಚೆಂಡು ಬೆಳ್ಳಿರಥ,ಆಳುಪಲ್ಲಕಿ ರಥ,ಎ. 10ರಂದು ಮಹಾರಥೋತ್ಸವ,
ಎ. 11 ಆರಾಡ ಅವಭ್ಯತ ಸ್ನಾನ, ಮಗ್ರಂತಾಯ ನೇಮ,ಎ. 12 ನೇಮೋತ್ಸವ ಪ್ರಧಾನ ದೈವ ಶ್ರೀ ಕೊಡಮಣಿತ್ತಾಯ ನೇಮ ನಡೆಯಲಿದೆ.