ಮಂಗಳೂರು: ಕೇರಳದಲ್ಲಿ ನಿಫಾ ಪತ್ತೆ, ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ

ಮಂಗಳೂರು: ಕೇರಳದಲ್ಲಿ ನಿಫಾ ಬೆನ್ನಲ್ಲೇ ಮಂಕಿ ಪಾಕ್ಸ್ ಸೋಂಕು ಭೀತಿ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಎಚ್ಚರಿಕೆ ಸೂಚಿಸಲಾಗಿದೆ. ಕೇರಳದ ಉತ್ತರ ಮಲಪ್ಪುರ ಜಿಲ್ಲೆಯ 38 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿ ಪಾಕ್ಸ್ ಸೋಂಕು ದೃಢವಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಮಾಡಲಾಗಿದೆ. ಆಫ್ರಿಕನ್ ದೇಶಗಳಲ್ಲೂ ಹರಡಿರುವ ಎಂಪಾಕ್ಸ್ ಸೋಂಕು, ಹೀಗಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ, ಬಂದರಿನಲ್ಲೂ ನಿಗಾ ವಹಿಸಲಾಗಿದೆ.
ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಹೇಳಿದೆ. ಎಂಪಾಕ್ಸ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕಾದಿರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಕುಲಾಲ್ ಮಂಕಿಪಾಕ್ಸ್ ವೈರಸ್ ನಿಂದ ಹರಡುವ ಕಾಯಿಲೆಯಾಗಿದೆ. ಮಂಗನ ಕಾಯಿಲೆ ಬೇರೆ ಮಂಕಿ ಪಾಕ್ಸ್ ಬೇರೆ, ಬೇರೆ ಪ್ರಾಣಿಗಳಲ್ಲೂ ಈ ಸೋಂಕು ಕಂಡು ಬರುತ್ತೆ.ಇದು ಸಿಡುಬು ನ್ನು ಹೋಲುವ ರೋಗವಾಗಿದೆ. ದೊಡ್ಡ ದೊಡ್ಡ ಗಾತ್ರದ ಗುಳ್ಳೆಗಳು ಮೈಮೇಲೆ ಬಂದು ಗುಳ್ಳೆಯಲ್ಲಿ ನೀರು ತುಂಬುತ್ತದೆ.
ರೋಗ ಬಂದು ಸುಮಾರು 21 ದಿನದವರೆಗೆ ರೋಗ ಲಕ್ಷಣ ಕಂಡು ಬರಬಹುದು, ರೋಗ ಬಂದು ಗುಣ ಆಗುವವರೆಗೂ ಆ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ರೋಗ ತೀವ್ರವಾಗಿ ಹರಡುವ ಸಾಧ್ಯತೆ ಇರುತ್ತದೆ. ಗುಳ್ಳೆಗಳಿಂದ ಬರುವ ದ್ರವ, ಉಸಿರಿನಿಂದಲೂ ಹರಡುವ ಸಾಧ್ಯತೆ ಇದೆ. 90% ಶೇಕಡಾ ಜನ ಇದರಿಂದ ಗುಣಮುಖ ಆಗ್ತಾರೆ. 10% ಜನ ಸಾವನಪ್ಪುವ ಸಾಧ್ಯತೆ ಇರುತ್ತದೆ. ಈಗಾಗಲೇ ಭಾರತದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಮಂಗಳೂರು ನಗರಕ್ಕೆ ಸಂಬಂಧಿಸಿ ಎರಡು ಪಾಯಿಂಟ್ ಆಫ್ ಎಂಟ್ರಿ ಇದೆ. ಒಂದು ಸಮುದ್ರದ ಮೂಲಕ ಬಂದರಿಗೆ ಬರೋದು, ಇನ್ನೊಂದು ವಿಮಾನ ನಿಲ್ದಾಣ. ಈ ಎರಡು ಜಾಗದಲ್ಲಿ ನಿಗಾ ಇರಿಸಿದ್ದೇವೆ ಎರಡು ಜನ ಮಾತ್ರ ಸೋಂಕಿತ ದೇಶದಿಂದ ಬಂದಿದ್ದಾರೆ. ಆದ್ರೆ ಅವರು ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದವರು ಅಲ್ಲ. ಸದ್ಯಕ್ಕೆ ಸ್ವಘೋಷಿತ ವಿಷಯ ಮಾತ್ರ ಪಡೆಯುತ್ತಿದ್ದೇವೆ. ಆ್ಯಕ್ಟೀವ್ ಸರ್ವಿಲೆನ್ಸ್ ಇನ್ನು ಸಹ ಮಾಡಿಲ್ಲ ಎಂದು ಹೇಳಿದ್ದಾರೆ.
ಮಂಕಿ ಪಾಕ್ಸ್ ಬಂದ ಬಳಿಕ ಗುಳ್ಳೆಯ ಕಲೆಗಳು ಉಳಿಯುವ ಸಾಧ್ಯತೆ ಇರುತ್ತದೆ. ಇದು ಮಾನಸಿಕವಾಗಿ ದೈಹಿಕವಾಗಿ ಎರಡು ರೀತಿಯಿಂದ ತೊಂದರೆ ಕೊಡುತ್ತದೆ. ನಿಫಾ ಪ್ರಕರಣ ಕೇರಳದಲ್ಲಿ ಕಂಡು ಬಂದಿದೆ. ನಿಫಾ ಬಾವಲಿಗಳ ಮೂಲಕ ಹರಡುತ್ತದೆ. ರೋಗ ತಗುಲಿದ್ರೆ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಡಾ.ನವೀನ್ ಕುಲಾಲ್ ಹೇಳಿದ್ದಾರೆ.