ಹಿಂದೂ ಮೆರವಣಿಗೆಗೆ ತಲವಾರು ಹಿಡಿದ 50 ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ: ಗಂಗಾಧರ್ ಕುಲ್ಕರ್ಣಿ
![](https://www.suddi9.com/wp-content/uploads/2024/09/Lifestyle-News-in-kannada-2024-09-23T120406.001-650x366.jpg)
ಮಂಗಳೂರು: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮಂಗಳೂರಿನಲ್ಲಿ ಮಾತನಾಡಿದ ಗಂಗಾಧರ್ ಕುಲ್ಕರ್ಣಿ, ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ಶ್ರೀರಾಮ ಸೇನೆ ರಕ್ಷಣೆ ನೀಡಲಿದೆ. ಶಸ್ತ್ರಸಜ್ಜಿತ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರು ಇನ್ನುಮುಂದೆ ರಕ್ಷಣೆ ನೀಡಲಿದ್ದಾರೆ. ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಹಾದಿ ಶಕ್ತಿಗಳು ಹದ್ದು ಮೀರುತ್ತಿವೆ ಎಂದು ಹೇಳಿದ್ದಾರೆ.
ಮುಸಲ್ಮಾನ ಪುಂಡರು ನಾಗಂಮಗಲ , ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವಂತ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇದಕ್ಕೇ ನೇರ ಕಾಂಗ್ರೆಸ್ ಸರಕಾರವೇ ಕಾರಣ. ಮುಸ್ಮಿಂ ಗುಂಡಾಗಳು ಓಪನ್ ಆಗಿ ಹೇಳ್ತಿದ್ದಾರೆ ಈಗ ಇರುವುದು ನಮ್ಮ ಸರಕಾರ ಎಂದು, ಇವರ ಉದ್ಘಾಟತನಕ್ಕೆ ರಾಜ್ಯ ಸರಕಾರ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಗೊತ್ತಿಲ್ಲ. ನಾಗಮಂಗಲ ಘಟನೆ ಆಕಸ್ಮಿಕ ಘಟನೆ ಅಂತಾರೆ. ಗೃಹ ಮಂತ್ರಿಗಳು ಅಯೋಗ್ಯರು. ವ್ಯವಸ್ಥಿತಿವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ? ಇದೇ ಮುಸ್ಲಿಂ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದೆ. ಇದರ ಹಿಂದೆ ಪಿ ಎಫ್ ಐ ನವರು ಇದ್ದಾರೆ. ಮೂರು ನಾಲ್ಕು ದಿನದ ಮುಂಚಿತವಾಗಿ ಅವರು ಬಂದು ನಾಗಮಂಗಲದಲ್ಲಿ ಇದ್ದರು.
ಈ ಕೂಡಲೇ ಗೃಹಸಚಿವರು ರಾಜೀನಾಮೆ ನೀಡಬೇಕು. ಮುಸ್ಮಿಂ ಗುಂಡಾಗಳಿಗೆ ಹೇಳುತ್ತಿದ್ದೇನೆ. ಕೈಯಲ್ಲಿ ಕಲ್ಲು ಹಿಡಿಯಲು ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಅಂದುಕೊಳ್ಳಬೇಡಿ. ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆ ನಾವು ರಕ್ಷಣೆ ನೀಡುತ್ತೇವೆ. ತಲವಾರು ಸಮೇತ 50 ಮಂದಿ ಶ್ರೀರಾಮಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನಿರ್ದಾರ ಕೈಗೊಳ್ಳಲಾಗಿದೆ. ಈ ರಾಜ್ಯ ಸರಕಾರದಿಂದ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಭೀತಾಗಿದೆ. ಅದಕ್ಕೆ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.