ಬೆಳ್ತಂಗಡಿ: ಬೋನಿಗೆ ಬಿದ್ದ ಚಿರತೆ, ಒಂದೆ ತಿಂಗಳಲ್ಲಿ ಎರಡು ಚಿರತೆ ಸೆರೆ

ಬೆಳ್ತಂಗಡಿ: ಇಂದು ಬೆಳ್ತಂಗಡಿಯಲ್ಲಿ ಚಿರತೆ ಯೊಂದು ಬೋನಿಗೆ ಬಿದ್ದಿದೆ. ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದಲ್ಲಿ ಒಂದೆ ತಿಂಗಳಲ್ಲಿ ಎರಡು ಚಿರತೆ ಸೆರೆ ಹಿಡಿಯಲಾಗಿದೆ. ಗುರಿಕಂಡ ಆನಂದ ಶೆಟ್ಟಿ ಎಂಬುವವರ ಮನೆಯ ಬಳಿಯ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ ಚಿರತೆಯೊಂದನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇದೀಗ ಮತ್ತೊಂದು ಚಿರತೆಯ ಸಂಚಾರದಿಂದ ಗ್ರಾಮಸ್ಥರಿಗೆ ಆತಂಕ ಉಂಟಾಗಿತ್ತು.
ಚಿರತೆಯ ಕಾಟ ತಾಳಲಾರದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದೀಗ ಒಂದೆ ತಿಂಗಳೊಳಗೆ ಮತ್ತೊಂದು ಚಿರತೆ ಸೆರೆ ಹಿಡಿಯಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಚಿರತೆ ಹಾವಳಿಯಿಂದ ಕಂಗೆಟ್ಟಿದ್ದ ಸವಣಾಲು ಗ್ರಾಮದ ಜನರಿಗೆ ಈಗ ನಿರಾಳವಾಗಿದೆ.