ಪೊಳಲಿ ಸೇತುವೆ ನಂತರ ಮರವೂರು ಸೇತುವೆ ಮೌಲ್ಯಮಾಪನ, ಜಿಲ್ಲಾಧಿಕಾರಿಗೆ ಸೇತುವೆಗಳ ಸಾಮರ್ಥ್ಯದ ವರದಿ ಸಲ್ಲಿಸಿದ ತಂಡ
ಮಂಗಳೂರು: ಸಂಚಾರಕ್ಕೆ ಅಸುರಕ್ಷಿತವೆಂದು ಪರಿಗಣಿಸಲಾಗಿರುವ ಜಿಲ್ಲೆಗಳ ಸೇತುವೆಗಳ ಮೌಲ್ಯಮಾಪನದ ಅಂಗವಾಗಿ ಬೆಂಗಳೂರಿನ ತಾಂತ್ರಿಕ ತಜ್ಞರ ತಂಡ ಮಂಗಳವಾರ ಮರವೂರು ಸೇತುವೆಯನ್ನು ಪರಿಶೀಲಿಸಿತು. ಇದಕ್ಕೂ ಮುನ್ನ ಪೊಳಲಿಯ ಅಡ್ಡೂರು ಸೇತುವೆಯನ್ನು ಮೌಲ್ಯಮಾಪನ ಮಾಡಲಾಗಿತ್ತು. ಮರವೂರು ಸೇತುವೆಯ ಪಿಲ್ಲರ್ ಒಂದಕ್ಕೆ ಹಾನಿಯಾದ ಕಾರಣ ಜೂನ್ 14ರಿಂದ ಮರವೂರು ಸೇತುವೆಯ ಮೇಲೆ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈಗಾಗಲೇ ಪೊಳಲಿ, ಉಳಾಯಿಬೆಟ್ಟು, ಬಳ್ಕುಂಜೆ ಸೇತುವೆಗಳನ್ನು ಪರಿಶೀಲಿಸಿದ ತಾಂತ್ರಿಕ ತಂಡ, ಮರವೂರು ಸೇತುವೆಯ ವಿವರವಾದ ಪರಿಶೀಲನೆ ನಡೆಸಿತು.ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ ಸೇತುವೆ ಕೆಳಭಾಗಕ್ಕೆ ಹೋಗಿ ಪರಿಶೀಲನೆ ಮಾಡಿದೆ.
ಸೇತುವೆಯ ರಚನಾತ್ಮಕ ಸಮಗ್ರತೆಯನ್ನು ನಿರ್ಣಯಿಸಲು ಪಿಲ್ಲರ್‌ಗಳು ಮತ್ತು ಗರ್ಡರ್‌ಗಳಿಂದ ಕಾಂಕ್ರೀಟ್ ಮಾದರಿಗಳನ್ನು ಸಂಗ್ರಹಿಸಿದರು. ತಂಡವು ತಮ್ಮ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದು, ನಂತರ ಅವರು ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಬೇಕು ಅಥವಾ ದುರಸ್ಥಿತಿ ಎಂಬ ಬಗ್ಗೆ ನಿರ್ಧಾರಿಸುತ್ತಾರೆ.