ಬಡಗಬೆಳ್ಳೂರು: ಮಜ್ಜಿಬೈಲ್ ಎಂಬ ಕುಗ್ರಾಮದ ವರಕೋಡಿಗೆ ರಸ್ತೆ ಸಂಪರ್ಕಿಸಲು ಅನುದಾನ ಬೇಕಿದೆ, ಶಾಸಕರು, ಸಂಸದರಿಗೆ ಗ್ರಾಮಸ್ಥರ ಮನವಿ

ಬಂಟ್ವಾಳ: ಒಂದು ಊರು ಎಂದ ಮೇಲೆ ಅದಕ್ಕೆ ಸರಿಯಾದ ಮೂಲ ಸೌಕರ್ಯ ಅತ್ಯಗತ್ಯ, ಅದು ನೀರು, ವಿದ್ಯುತ್, ರಸ್ತೆ, ಇನ್ನು ಅನೇಕ, ಅದರಲ್ಲೂ ರಸ್ತೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಿಂದಿನ ಕಾಲದಲ್ಲಿ ಅಂದರೆ ಸ್ವಾತಂತ್ರ್ಯಕ್ಕೂ ಮುನ್ನ ನಮ್ಮ ದೇಶದಲ್ಲಿ ಕಚ್ಚಾ ಅಥವಾ ಡಾಮಾರೀಕರಣಗೊಳ್ಳದ ರಸ್ತೆಗಳು ಇತ್ತು. ಆಗ ಸರಿಯಾದ ರಸ್ತೆ ವ್ಯವಸ್ಥೆಗಳು ಇರಲಿಲ್ಲ, ಅದರ ಜ್ಞಾನವೂ ನಮ್ಮವರಲ್ಲಿ ಇರಲಿಲ್ಲ. ಪರಕೀಯರ ದಾಳಿ ನಂತರ ರಸ್ತೆ ಡಾಮಾರೀಕರಣ ಎಂಬ ಪ್ರಯೋಗ ಬಂತು. ಅಲ್ಲಿಂದ ಪ್ರತಿ ಊರಿಗೂ ಡಾಮಾರೀಕರಣದ ಕಲ್ಪನೆ ಬಂತು. ಸ್ವಾತಂತ್ರ್ಯ ನಂತರ ನಮ್ಮ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಆಡಳಿತ ಅಥವಾ ರಾಜಕೀಯದ ವ್ಯವಸ್ಥೆ ಬಂತು. ಆ ರಾಜಕೀಯ ಪಕ್ಷಗಳು ಸರ್ಕಾರ ರಚನೆ ಮಾಡಿ ಜನರ ಅಶೋತ್ತರಗಳನ್ನು ಈಡೇರಿಸುವ ಕ್ರಮ ಬಂತು. ಎಲ್ಲ ಪಕ್ಷಗಳು ಸರ್ಕಾರ ರಚನೆಗೂ ಮುನ್ನ ಜನರ ಮುಂದೆ ಈ ಭರವಸೆಯನ್ನು ನೀಡುತ್ತಾರೆ, ರಸ್ತೆ, ನೀರು, ವಿದ್ಯುತ್. ರಸ್ತೆ ಎಷ್ಟು ಮುಖ್ಯ ಎನ್ನುವುದು ಸರ್ಕಾರಕ್ಕೂ ಗೊತ್ತಿದೆ ನೋಡಿ. ಹೌದು ಇಷ್ಟೆಲ್ಲ ಪೀಠಿಕೆ ಹಾಕಲು ಈ ರಸ್ತೆ ಕಾರಣ .
ಹೌದು ಒಂದು ಊರು ಎಂದಾಗಬೇಕೆಂದರೆ ಜನರು ಎಷ್ಟು ಮುಖ್ಯನೋ, ರಸ್ತೆ ಕೂಡ ಈ ಜನರಿಗೆ ಮುಖ್ಯವಾಗಿರುತ್ತದೆ. ಅದು ಎಲ್ಲದಕ್ಕೂ ಹಾದಿಯಾಗಿರುತ್ತದೆ. ರಸ್ತೆ ಇಲ್ಲದೇ ಯಾವುದೂ ನಡೆಯಲು ಸಾಧ್ಯವಿಲ್ಲ. ಇಲ್ಲೊಂದು ಊರಿಗೆ ಕಚ್ಚಾ ರಸ್ತೆ ಇದೆ. ಆದರೆ ಅದನ್ನು ಸರಿಯಾಗಿ ನಿರ್ಮಾಣ ಮಾಡಬೇಕು. ಅದನ್ನು ಡಾಮಾರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಬೇಕು ಎನ್ನುವುದು ಅಲ್ಲಿ ಊರಿನ ಜನ ಆಸೆಯಾಗಿದೆ. ಸೂರ್ಲದ ಈ ರಸ್ತೆ ಬಡಗಬೆಳ್ಳೂರು ಗ್ರಾಮ ಪಂಚಾಯತ್ಗೆ ಸೇರಿದ ರಸ್ತೆ. ಈ ದಾರಿ ಅನೇಕ ರಸ್ತೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಪೊಳಲಿ ವಿವೇಕಾನಂದ ರಸ್ತೆಯಿಂದ ಕೃಷ್ಣನಗರ ಮಣಿಕಂಠಪುರದವರೆಗೆ ಕಂಕ್ರೀಟ್ ರಸ್ತೆ ನಿರ್ಮಾಣವಾಗಿದೆ ಜಿಲ್ಲಾ ಪಂಚಾಯತ್ ಹಾಗೂ ಶಾಸಕರ ನಿಧಿಯಿಂದ ಅನುದಾನ ದೊರಕಿದೆ. ಸೂರ್ಲದಿಂದ ಮಜ್ಜಿಬೈಲ್ ಪರಿಸರದವರೆಗೆ ಕಚ್ಚಾ ರಸ್ತೆ ಮಾಡಲು ಈಗಾಗಲೇ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಸಹಾಯವನ್ನು ಮಾಡಿದೆ, ಅದಕ್ಕಾಗಿ ಹಣವನ್ನು ಕೂಡ ಇಡಲಾಗಿತ್ತು. ಆದರೆ ಈ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಹಣ ಬೇಕಾಗಿದೆ. ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಾದ ಉಮೇಶ್ ಶೆಟ್ಟಿ, ಮಮತಾ ಅವರು ಹೆಚ್ಚಿನ ಅನುದಾನವನ್ನು ಇದಕ್ಕಾಗಿ ಶ್ರಮವಹಿಸಿದ್ದಾರೆ. .ಇದೀಗ ಈ ರಸ್ತೆ ವರಕೋಡಿಗೆ ಸಂಪರ್ಕಿಸಲು 30 ಲಕ್ಷ ರೂ. ಖರ್ಚು ಆಗುವುದಾಗಿ ಅಂದಾಜಿಸಲಾಗಿದೆ.ಇದಕ್ಕಾಗಿ ಈ ಜಾಗದವರ ಅನುಮತಿಯೊಂದಿಗೆ ಇದಕ್ಕಾಗಿ ಬಂಟ್ವಾಳ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಹಾಗೂ ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದ ಸಂಸದರಾದ ಬ್ರಿಜೇಶ್ ಚೌಟ ಹೆಚ್ಚಿನ ಅನುದಾನ ಹಾಗೂ ಸಹಕಾರ ನೀಡಬೇಕು ಎನ್ನುವುದು ಈ ಊರಿನ ಹಾಗೂ ಪಂಚಾಯತ್ ಸದಸ್ಯರ ಮನವಿಯಾಗಿದೆ.
ನೂರಾರು ವರ್ಷಗಳೀಂದ ರಸ್ತೆ ಇಲ್ಲದೇ ಈ ಭಾಗದ ಸದಸ್ಯರ ಮುತ್ರವರ್ಜಿಯಿಂದ ಮಜ್ಜಿಬೈಲ್ ಎಂಬ ಕುಗ್ರಾಮಕ್ಕೆ ಒಂದು ಕಚ್ಚಾ ರಸ್ತೆ ಆಗಿದೆ. ಅದಕ್ಕಾಗಿ ಹೆಚ್ಚಿನ ಅನುಧಾನಕ್ಕೆ ಸಂಸದರು ಹಾಗೂ ಶಾಸಕರು ಸಹಾಯ ಅಗತ್ಯವಾಗಿದೆ. ಈ ರಸ್ತೆಗಾಗಿ ಅನೇಕರ ಶ್ರಮ ಕೂಡ ಇದೆ. ಈ ರಸ್ತೆಗೆ ದಿ.ಮಂಜಯ್ಯ ಚೌಟ ಅವರ ಕೂಡುಗೆ ಕೂಡ ಇದೆ. ಇನ್ನು ಸೂರ್ಲದಿಂದ ದಿ. ದೊಂಬಯ್ಯಪೂಜಾರಿಹಾಗೂ ದಿ. ವೆಂಕ್ಕಪ್ಪಪೂಜಾರಿಯವರ ಜಾಗದಿಂದ ಹಾದು ಹೋಗುವ ಮಜ್ಜಿಬೈಲ್ ವರೆಗೆ ರಸ್ತೆಗೆ ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷೆ ರೂಪ ಶ್ರೀಯವರೊಂದಿಗೆ ಚರ್ಚಿಸಿ ಈ ವಾರ್ಡ್ ಮೆಂಬರ್ ಉಮೇಶ್ ಶೆಟ್ಟಿ, ಮಮತಾ ಅವರ ಸಹಾಯದಿಂದ ಕಚ್ಚಾ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಯನ್ನು ವರಕೋಡಿಗೆ ಸಂಪರ್ಕಿಸುವ ಕಾರಣ ದೊಡ್ಡ ಮಟ್ಟದ ಅನುದಾನ ಬೇಕಾಗಿದೆ.ವರಕೋಡಿಯಿಂದ ಮಜ್ಜಿಬೈಲುವರೆಗಿನ ಜಾಗದ ಮಾಲಕರು ಇದರ ಬಗ್ಗೆ ಅನುಕಂಪ ನೀಡಿದರೆ . ಈ ಬಗ್ಗೆ ಶಾಸಕರು ಹಾಗೂ ಸಂಸದರು ಅನುದಾನ ನೀಡಲು ತುಂಬಾ ಸಹಕಾರವಾಗಲಿದೆ. ಎನ್ನುವುದು ಅಲ್ಲಿನ ಜನರ ಅಭಿಪ್ರಾಯವಾಗಿದೆ.