ಪೊಳಲಿ ಸೇತುವೆ ಬಿರುಕು: ಪ್ರತಿಭಟನೆಯೋ…? ಪರಿಹಾರವೋ…? ಸೆಪ್ಟೆಂಬರ್ 9ಕ್ಕೆ ಸಮಾಲೋಚನಾ ಸಭೆ

ಅಡ್ಡೂರು ಸೇತುವೆ ಸಮಸ್ಯೆಗೆ ಸರಿಯಾದ ಕ್ರಮ ತೆಗೆದುಕೊಳ್ಳದ ಜಿಲ್ಲಾಡಳಿತದ ವಿರುದ್ಧ ಪೊಳಲಿಯ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಸಮಾಲೋಚನಾ ಸಭೆ ನಡೆಸಲಿದೆ ಎಂದು ಗ್ರಾಮಸ್ಥರು ನಿರ್ಧಾರಿಸಿದ್ದಾರೆ. ಸಪ್ಟೆಂಬರ್ 9 ಸೋಮವಾರ ಬೆಳಿಗ್ಗೆ 9:30ಕ್ಕೆ ಸರಿಯಾಗಿ ಪೊಳಲಿ ಸರ್ವ ಮಂಗಳ ಹಾಲ್ನಲ್ಲಿ ಸಭೆ ನಡೆಸಲಿದೆ ಎಂದು ಹೇಳಲಾಗಿದೆ. ಅಡ್ಡೂರು ಸೇತುವೆ ಬಗ್ಗೆ ಇಂದಿನ ವರೆಗೆ ಜಿಲ್ಲಾಡಳಿತ ಯಾವುದೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಕಾರಣಕ್ಕೆ ಅಲ್ಲಿನ ಜನ ಅಕ್ರೋಶಗೊಂಡು ಪ್ರತಿಭಟನೆ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಅದರೂ ಜಿಲ್ಲಾಧಿಕಾರಿ ಯಾವುದಕ್ಕೂ ಕೇರ್ ಎಂದಿಲ್ಲ. ಸಾರ್ವಜನಿಕ ಬಗ್ಗೆ ಒಬ್ಬ ಜಿಲ್ಲಾಧಿಕಾರಿ ಇಷ್ಟೊಂದು ನಿರ್ಲ್ಯಕ್ಷ್ಯ ಧೋರಣೆ ಯಾಕೆ ಎಂಬುದು ತಿಳಿಯುತ್ತಿಲ್ಲ.
ಇದೀಗ ಅಧಿಕಾರಿಗಳನ್ನು ನಂಬಿಕೊಂಡರೆ ಪ್ರಯೋಜನ ಇಲ್ಲ ಎಂದು ಸಾರ್ವಜನಿಕರೇ ಮುಂದೆ ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆದ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ. ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಘನ ವಾಹನಗಳನ್ನು ಸಂಚಾರಿಸಬರದು ಎಂದು ಏಕಾಏಕಿ ಬಂದ್ ಮಾಡಿದ್ರು, ಸಾರ್ವಜನಿಕರಿಗೆ ಕೆಲಸಕ್ಕೆ ಹೋಗುವವರು, ಪೊಳಲಿ ದೇಗುಲಕ್ಕೆ ಬರುವ ಭಕ್ತರಿಗೆ, ಶಾಲಾ ಮಕ್ಕಳಿಗೆ ಹೀಗೆ ಅನೇಕರಿಗೆ ಇದೀಗ ಈ ನಿರ್ಧಾರ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆಯನ್ನು ಮಾಡದೇ ಏಕಾಏಕಿ ಬಂದ್ ಮಾಡಿದ್ದಾರೆ.
ಆಮೇಲೆ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಲಾಗಿತ್ತು, ಬಸ್, ಶಾಲಾ ವಾಹನಗಳಿಗೆ ಹೋಗಲು ಅವಕಾಶ ನೀಡಿ ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಎರಡು ದಿನದೊಳಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡರು. ಅದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಜಿಲ್ಲಾಧಿಕಾರಿಗಳೇ ಈ ಪ್ರದೇಶಕ್ಕೆ ಬಂದು ಸೇತುವೆ ಪರಿಶೀಲನೆ ನಡೆಸಿದರು. ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿ. ಸೇತುವೆಯ ಧಾರಣ ಸಾಮರ್ಥ್ಯವನ್ನು ಪರಿಶೀಲನೆ ಮಾಡುವ ಯಂತ್ರವು ಬರುತ್ತದೆ ಆಮ್ಮೇಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಎಂದು ಹೇಳಿ. ಅಲ್ಲಿಂದ ಹೋದರು ಮತ್ತೆ ಪತ್ತೆ ಇಲ್ಲ.
ಶಾಕಸರು, ಸ್ಥಳೀಯ ನಾಯಕರು ಎಲ್ಲರೂ ಮಾತನಾಡಿ ಆಯಿತು. ಆದರೆ ಇದೀಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಹೀಗಾದರೆ ತುಂಬಾ ಕಷ್ಟ ಎಂದು ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿಲಿದ್ದಾರೆ.
