“ಅಡ್ಡೂರು ಚೌತಿ”ಗೆ ವಿಧ್ಯುಕ್ತ ಚಾಲನೆ, ಮಾಧವ ಭಟ್ ನೇತೃತ್ವದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠೆ

ಅಡ್ಡೂರಿಗೆ ಈ ಗಣಪತಿ ಸಂಕಷ್ಟ ಮುಕ್ತಿ, ಇಂದು ಎಲ್ಲ ಕಡೆ ಗಣಪತಿ ಹಬ್ಬದ ಸಂಭ್ರಮ ಕಲೆಗಟ್ಟಿದೆ. ಇದರಲ್ಲಿ ಅಡ್ಡೂರಿನ ಗಣಪ ಕೂಡ ಒಂದು, ಅಡ್ಡೂರಿನಲ್ಲಿ ಅದ್ಧೂರಿಯಾಗಿ ಚೌತಿ ನಡೆಯುತ್ತಿದೆ. “ಅಡ್ಡೂರು ಚೌತಿ” ಎಂದೆ ಪ್ರಸಿದ್ಧಿಯನ್ನು ಪಡೆದಿದೆ. ಈ ಬಾರಿ ಅಡ್ಡೂರು 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠನೆ ನಡೆದು, ಭಜನೆಗೆ ಚಾಲನೆಯನ್ನು ನೀಡಲಾಗಿತ್ತು.
ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ತುಂಬಾ ಅದ್ಧೂರಿಯಾಗಿ ಬೆನಕ ಮಂಟಪದಲ್ಲಿ ನಡೆಯಲಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್ ಪವಿತ್ರ ಪಾಣಿ ಅವರ ನೇತೃತ್ವದಲ್ಲಿ ಗಣಪತಿಯ ವಿಗ್ರಹ ಪ್ರತಿಷ್ಠೆ ನಡೆಯಿತು. ಇದರ ಜತೆಗೆ ಭಜನ ಕಾರ್ಯಕ್ರಮಕ್ಕೂ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಗಿತು.

ಭಜನೆ ಕಾರ್ಯಕ್ರಮ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೊಳಲಿ, ಶ್ರೀ ವಿಠೋಭ ಬಾಲ ಭಜನಾ ಮಂದಿರ, ಕರಿಯಂಗಳ, ಪಲ್ಲಿಪಾಡಿ, ಶ್ರೀ ಈಶ್ವರೀ ಭಜನಾ ಮಂಡಳಿ, ಕಾಂಜಿಲಕೋಡಿ, ಶ್ರೀ ರಾಜಶ್ರೀ ಮಹಿಳಾ ಮಂಡಳಿ ಪೊಳಲಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಇಂದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸೇರಿಸಿದಂತೆ ಸಮಿತಿಯ ಸದಸ್ಯರು, ಸಿಬ್ಬಂದಿಗಳು ಹಾಗೂ ಊರಿನ ಜನರು ಭಾಗವಹಿಸಿದರು.

ಇನ್ನು ಇದರ ಜತೆಗೆ ಗಣಹೋಮ ಕೂಡ ನಡೆಯಿತು. ಮಹಾಪೂಜೆ ಕೂಡ ನಡೆಯಿತು. ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ತಂಡಗಳಿಗೆ ಯಕ್ಷ-ಗಾನ-ನಾಟ್ಯ-ಹಾಸ್ಯ-ಅರ್ಥ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮ ಕೂಡ ನಡೆಯಲಿದೆ.